ಕಟೀಲು :ಮನೆಯ ಕೈತೋಟದಲ್ಲೇ ಸೊಪ್ಪು ತರಕಾರಿ ಹೂವಿನ ಗಿಡಗಳನ್ನು ಬೆಳೆಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ನಾವು ಬೆಳೆಸಿದ ತರಕಾರಿಯನ್ನು ಅಡುಗೆಯಲ್ಲಿ ಬಳಸಿದಾಗ ತೃಪ್ತಿಯೂ ಹೆಚ್ಚಾಗಿರುತ್ತದೆ ಎಂದು ಪುತ್ತೂರಿನ ಸಾವಯವ ಕೃಷಿಕ ಹರಿಕೃಷ್ಣ ಕಾಮತ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದವರು
ಆಯೋಜಿಸಿದ ಕೈತೋಟ ನಿರ್ಮಾಣ ತರಬೇತಿ ನಡೆಸಿಕೊಟ್ಟರು. ಕಡಿಮೆ ಸ್ಥಳಾವಕಾಶ ಇದ್ದವರು ಒಂದು ಸೊಪ್ಪು ಒಂದು ತರಕಾರಿಯನ್ನಾದರೂ ಬೆಳೆಸಿ. ಮುಂದಕ್ಕೆ ಕೈ ತೋಟ ಆಸಕ್ತಿಯ ಭಾಗವಾಗುತ್ತದೆ ಎಂದರು ಹರಿಕೃಷ್ಣ ಕಾಮತ್ ಹೇಳಿದರು.
ಕಟೀಲು ದೇಗುಲದ ವಿಶೇಷ ಅಧಿಕಾರಿ ಮೋಹನ್ ರಾವ್ ಉದ್ಘಾಟಿಸಿದರು. ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ ಮಾತನಾಡಿ ಎಲ್ಲ ಕಡೆಯೂ ತಮ್ಮ ಬಳಗದಿಂದ ಉಚಿತವಾಗಿ ಈ ರೀತಿಯ ತರಗತಿ ನಡೆಸಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ಕಟೀಲು ವಿದ್ಯಾಲಯಗಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್. ಶಿಕ್ಷಕ ರಾಜಶೇಖರ್ ಮತ್ತಿತರರಿದ್ದರು. ಉಪನ್ಯಾಸಕಿ ಶೈಲಜಾ ನಿರೂಪಿಸಿದರು. ನಿಶ್ಮಿತಾ ವಂದಿಸಿದರು.
Kshetra Samachara
31/07/2022 06:05 pm