ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ನದಿ ತೀರದ ಪರಿಸರದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ನಂದಿನಿ ನೀರಿನ ಮಟ್ಟ ಏರಿಕೆಯಾಗಿದ್ದು, ನಾನಿತೀರದ ಪ್ರದೇಶಗಳಾದ ಪಕ್ಷಿಕೆರೆ ಸಮೀಪದ ಪಂಜ ಮತ್ತು ಉಲ್ಯ ಭಾಗದಲ್ಲಿ 28 ಮನೆಗಳು ಜಲಾವೃತವಾಗಿದೆ. ಕಿಲೆಂಜೂರಿನಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡ ಕಾರಣ ಅಲ್ಲಿನ ಎಲ್ಲಾ ಮನೆಯವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಕಿಲೆಂಜೂರಿನ ಕಾಮೈತೋಟ ದೇವಕಿ ಶೆಟ್ಟಿ ಎಂಬುವವರ ದನದ ಹಟ್ಟಿಯ ಪಾಶ್ವ ಕುಸಿದಿದೆ. ನಾಟಿ ಮಾಡಿದ ಭತ್ತದ ಕೃಷಿ ಜಲಾವೃತವಾಗಿದೆ.
Kshetra Samachara
08/07/2022 03:54 pm