ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆದ್ಯಪಾಡಿ: ರಸ್ತೆ ಕುಸಿದು ಸಂಚಾರಕ್ಕೆ ತೊಂದರೆ; ಶಾಸಕ ಡಾ.ಭರತ್ ಶೆಟ್ಟಿ ಪರಿಶೀಲನೆ

ಮಂಗಳೂರು: ನಗರ ಉತ್ತರ ಕ್ಷೇತ್ರದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದ್ಯಪಾಡಿಯಿಂದ ಕೆಂಜಾರಿಗೆ ಸಾಗುವ ಸಾರ್ವಜನಿಕ ರಸ್ತೆ ವಿಪರೀತ ಮಳೆ ನೀರಿನ ಪ್ರವಾಹಕ್ಕೆ ಕುಸಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ಕೂಡಲೇ ಅಧಿಕಾರಿಗಳಿಗೆ ತಕ್ಷಣ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಸೂಚನೆ ನೀಡಿದರು.ಆದ್ಯಪಾಡಿಯಿಂದ ಕೈಕಂಬ ಹೋಗುವ ಜನರಿಗೆ ಭೂ ಕುಸಿತದಿಂದ ತೊಂದರೆಯಾಗಿದ್ದು, ಶಾಸಕರ ಸೂಚನೆಯಿಂದ ಅಧಿಕಾರಿಗಳು ಕಾರ್ಯತತ್ಪರರಾಗಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/07/2022 08:09 pm

Cinque Terre

4.13 K

Cinque Terre

0

ಸಂಬಂಧಿತ ಸುದ್ದಿ