ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನಗರದ ಮನೆ ಒಂದರಲ್ಲಿ ಒಬ್ಬರೇ ವಾಸವಾಗಿ ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದು ಸ್ಥಳಕ್ಕೆ ಧಾವಿಸಿದ ಹಳೆಯಂಗಡಿ ಗ್ರಾಮ ಅಧ್ಯಕ್ಷರು ಸದಸ್ಯರ ಹಾಗೂ ಪೊಲೀಸರ ನೆರವಿನಿಂದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಳೆಯಂಗಡಿ ರಾಮನಗರ ನಿವಾಸಿ ಪಿಕೆ ನಾರಾಯಣ (60) ಎಂಬವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಕುಟುಂಬದವರು ಅವರನ್ನು ಬಿಟ್ಟು ಹೋಗಿದ್ದು ಅಸಹಾಯಕರಾಗಿ ಏಕಾಂಗಿ ಜೀವನ ನಡೆಸುತ್ತಿದ್ದರು. ಕಳೆದ ಎರಡು ದಿನಗಳಿಂದ ಮನೆಯಲ್ಲಿದ್ದವರ ಯಾವುದೇ ಸುದ್ದಿ ಇಲ್ಲದೆ ಅನುಮಾನದಿಂದ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ವಿನೋದ್, ನಾಗರಾಜ್, ಸಾಮಾಜಿಕ ಕಾರ್ಯಕರ್ತರಾದ ಜೀವನ ಪ್ರಕಾಶ್, ಶ್ಯಾಮ್ ಪ್ರಸಾದ್ ಹಾಗೂ ಮುಲ್ಕಿ ಪೊಲೀಸರು ಮನೆಯೊಳಗೆ ಭೇಟಿ ನೀಡಿದಾಗ ನಾರಾಯಣ ತೀವ್ರ ಅಸ್ವಸ್ಥಗೊಂಡಿರುವುದು ಕಂಡು ಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಅವರು ಪರಿಸರ ಸಹಕಾರದೊಂದಿಗೆ ಅಸ್ವಸ್ಥಗೊಂಡ ನಾರಾಯಣರವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

02/07/2022 03:17 pm

Cinque Terre

3.33 K

Cinque Terre

0

ಸಂಬಂಧಿತ ಸುದ್ದಿ