ಕಟೀಲು : ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸುಭಾಸ್ ಚಂದ್ರ ಬೋಸ್ ಝಾನ್ಸಿ ರಾಣಿ ಭಗತ್ ಸಿಂಗ್. ಸಾವರ್ಕರ್ ರಂತಹವರ ತ್ಯಾಗ ನಮಗೆಲ್ಲ ಸ್ಫೂರ್ತಿ ಆಗಬೇಕು. ತಪ್ಪದೆ ಮತ ಚಲಾಯಿಸುವುದಷ್ಟೇ ಅಲ್ಲದೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಸಂಕಲ್ಪವೂ ನಮ್ಮಲ್ಲಿರಬೇಕು, ದೇಶದ ಇತಿಹಾಸ ಅರಿಯುವ, ಓದುವ ಹಂಬಲ ಬೇಕು ಎಂದು ಖ್ಯಾತ ವಾಗ್ಮಿ, ವಿದ್ವಾಂಸ ಪಾಂಡುರಂಗ ಶ್ಯಾನುಭಾಗ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾಲಯಗಳಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿದರು. ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಧ್ವಜಾರೋಹಣಗೈದರು.
ಇದೇ ಸಂದರ್ಭ ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿವಿಧ ಸ್ಪರ್ಧಾವಿಜೇತರನ್ನು ಅಭಿನಂದಿಸಲಾಯಿತು. ಪ್ರಾಚಾರ್ಯ ಕುಸುಮಾವತಿ, ಉಪಪ್ರಾಚಾರ್ಯ ಸೋಮಪ್ಪ ಅಲಂಗಾರು ವಿದ್ಯಾರ್ಥಿ ನಾಯಕ ಸುಹಾಸ್. ವರ್ಷಾ ಉಪಸ್ಥಿತರಿದ್ದರು. ಉಪನ್ಯಾಸಕಿ ವಿಜಯಾ ಆಳ್ವ ನಿರೂಪಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು.
Kshetra Samachara
26/01/2022 10:34 pm