ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮರಕಡ 14ನೇ ವಾರ್ಡ್ ವಿಮಾನ ನಿಲ್ದಾಣ ರಸ್ತೆಗೆ ತಡೆ ಗೋಡೆ ಹಾಗೂ ಫುಟ್ ಪಾತ್ ನಿರ್ಮಾಣಕ್ಕೆ ಚಾಲನೆ

ಮರಕಡ:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಮರಕಡ 14 ನೆ ವಾರ್ಡಿನಲ್ಲಿ ವಿಮಾನ ನಿಲ್ದಾಣ ರಸ್ತೆಗೆ ತಡೆ ಗೋಡೆ ಹಾಗೂ ಫುಟ್ ಪಾತ್ ನಿರ್ಮಾಣಕ್ಕೆ ಪಾಲಿಕೆಯ ಪ್ರೀಮಿಯಂ ಎಫ್. ಎ .ಆರ್ ನಿಧಿಯಿಂದ ಮತ್ತು ಸಾಮಾನ್ಯ ನಿಧಿಯಿಂದ 3.96 ಕೋಟಿ ಅನುದಾನದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ , ಮ.ನ.ಪಾ.ಸದಸ್ಯರಾದ ಲೋಹಿತ್ ಅಮೀನ್, ಶರತ್ ಕುಂಜತ್ ಬೈಲ್ , ಭಾಜಪ ಮಂಗಳೂರು ಉತ್ತರದ ಅಧ್ಯಕ್ಷ ತಿಲಕ್ ರಾಜ ಕೃಷ್ಣಾಪುರ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/08/2021 12:42 pm

Cinque Terre

14.75 K

Cinque Terre

0

ಸಂಬಂಧಿತ ಸುದ್ದಿ