ಕಾರ್ಕಳ: ಉಡುಪಿ ಜಿಲ್ಲಾ ರಜತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ಯುವ ಜನತೆಯನ್ನು ಸೈನ್ಯಕ್ಕೆ ಸೇರಲು ಅಗ್ನಿಪಥ್ ಯೋಜನೆ ಕುರಿತು ಜಾಗೃತಿ ಮೂಡಿಸಲು ಅಗ್ನಿಪಥ್ ದೌಡ್ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಡಳಿತ ಮತ್ತು ಟೀಮ್ ನೇಶನ್ ಫಸ್ಟ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಚಿವ ಸುನಿಲ್ ಕುಮಾರ್ ಇಂದು ಚಾಲನೆ ನೀಡಿದರು. ಸುಮಾರು 75 ಕಿ.ಮೀ. ಮ್ಯಾರಥಾನ್ ಓಟ "ಅಗ್ನಿಪಥ್ ದೌಡ್" ಕಾರ್ಕಳ ಭುವನೇಂದ್ರ ಕಾಲೇಜಿನಿಂದ ಆರಂಭಗೊಂಡಿತು.
ನಾಳೆ ಉಡುಪಿಯ ಅಜ್ಜರಕಾಡು ಕ್ರೀಡಾಂಗಣ ತಲುಪಲಿರುವ ದೌಡ್‌ನಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕ ಯುವತಿಯರು ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಜೊತೆಗೆ ಉಡುಪಿ ಜಿಲ್ಲೆ ರಚನೆಗೊಂಡು 25ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಳೆ ಉಡುಪಿ ಜಿಲ್ಲೆ ರಜತ ಮಹೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ.
Kshetra Samachara
24/08/2022 09:40 am