ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ದೇವಸ್ಥಾನ, ಮಠ-ಮಂದಿರ ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ"

ಮುಲ್ಕಿ: ದೇವಸ್ಥಾನಗಳು, ಮಠ- ಮಂದಿರಗಳು ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಕೆಲಸ ಆಗಬೇಕು ಎಂದು ಶ್ರೀ ಕ್ಷೇತ್ರ ಬಾರಕೂರು ಮಹಾ ಸಂಸ್ಥಾನದ ವಿದ್ಯಾವಾಚಸ್ಪತಿ ಡಾ. ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

ಅವರು ಉಳೆಪಾಡಿ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಸ್ಥಾನದ ಬಳಕುಂಜೆ ಕೊಟ್ನಾಯಗುತ್ತು ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣಗೊಂಡ ಬಳಕುಂಜೆ ಚೆನ್ನಯ ಬೆನ್ನಿ ದಿ. ನೇತ್ರಾವತಿ ಶೆಡ್ತಿ ಮತ್ತು ದಿ. ಭೋಜ ಶೆಟ್ಟಿ ದಂಪತಿ ಸ್ಮರಣಾರ್ಥ ಅವರ ಪುತ್ರ ಡಾ. ವಿರಾರ್ ಶಂಕರ ಬಿ. ಶೆಟ್ಟಿ ಸೇವಾ ರೂಪದ ಸ್ವಾಗತ ಮಹಾ ದ್ವಾರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಹಿಂದೂ ಧರ್ಮವು ನಮ್ಮ ಸಂಸ್ಕತಿ ಆಚರಣೆ, ದೇವಸ್ಥಾನಗಳಿಂದ ಉಳಿದಿದೆ. ಈ ನಿಟ್ಟಿನಲ್ಲಿ ಮುಂಬಯಿ ಉದ್ಯಮಿಗಳು ನಮ್ಮ ಉಭಯ ಜಿಲ್ಲೆಯ ದೇವಸ್ಥಾನಗಳ ಅಭಿವೃದ್ಧಿಗೆ ದೊಡ್ದ ಕೊಡುಗೆ ನೀಡಿದ್ದಾರೆ ಅದನ್ನು ನೆನಪಿಸಬೇಕು ಎಂದರು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಮ್ . ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.ಮುಲ್ಕಿ ಸೀಮೆಯ ಆರಸರಾದ ದುಗ್ಗಣ ಸಾವಂತರು ಉದ್ಘಾಟಿಸಿ ಶುಭ ಹಾರೈಸಿದರು. ಕಟೀಲಿನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

26/10/2020 08:59 am

Cinque Terre

10.14 K

Cinque Terre

0

ಸಂಬಂಧಿತ ಸುದ್ದಿ