ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಸೇತುವೆ ಬಳಿಯ ದ್ವಿಚಕ್ರವಾಹನದ ಗ್ಯಾರೇಜ್ ಸಮೀಪದಲ್ಲಿ ಮನೆಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಕಾರ್ಮಿಕರು ಮುಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಮೂಡಬಿದ್ರೆ ಸಾಣೂರು ನಿವಾಸಿ ನಿತಿನ್ (24), ಮೂಡು ಮಾರ್ನಾಡು ವಿಶ್ವನಾಥ ಪೂಜಾರಿ ( 47), ಧರೆಗುಡ್ಡೆ ನಿವಾಸಿಗಳಾದ ಉಮೇಶ್ ಶೆಟ್ಟಿ (34), ಪ್ರೇಮದಾಸ (41)ಎಂದು ಗುರುತಿಸಲಾಗಿದೆ
ಗಾಯಾಳು ಕಾರ್ಮಿಕರು ಮನೆಯೊಂದರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಹೆಜ್ಜೇನು ಹುಳುಗಳು ದಾಳಿ ನಡೆಸಿದೆ. ಈ ಸಂದರ್ಭ ಕಾರ್ಮಿಕರು ಪ್ರಾಣಭಯದಿಂದ ಸ್ಥಳದಿಂದ ಓಡಿದ್ದಾರೆ. ಆಸ್ಪತ್ರೆಗೆ ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಾಣೇಶ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
Kshetra Samachara
06/10/2022 07:56 pm