ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತೊಟ್ಟಂ ಸಮುದ್ರ ತೀರದಲ್ಲಿ ರಾಶಿ ರಾಶಿ ಮೀನು; ಮುಗಿಬಿದ್ದ ಜನ!

ಮಲ್ಪೆ: ಮಲ್ಪೆ ಸಮೀಪದ ತೊಟ್ಟಂ ಸಮುದ್ರ ತೀರದಲ್ಲಿ ರಾಶಿ ರಾಶಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದು, ಮತ್ಸ್ಯ ಪ್ರಿಯರು ನಾ ಮುಂದು ತಾ ಮುಂದು ಎಂದು ಮೀನಿಗಾಗಿ ಮುಗಿ ಬಿದ್ದಿದ್ದಾರೆ.

ಉಡುಪಿಯ ತೊಟ್ಟಂನ ದಡದಲ್ಲಿ ಇವತ್ತು ಅಲೆಗಳೊಂದಿಗೆ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿವೆ.ಇದನ್ಬು ನೋಡಿದ ಜನ ಮೀನುಗಳನ್ನು ಸಂಗ್ರಹಿಸಲು ಮುಗಿಬಿದ್ದಿದ್ದಾರೆ.ಸದ್ಯ ಕಡಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಕಾಣಿಸಿಕೊಂಡಿವೆ.

ಸಮುದ್ರದಲ್ಲಿ ಗುಂಪಾಗಿ ಕಣಿಸಿಕೊಳ್ಳುವ ಬೂತಾಯಿ ಮೀನುಗಳು ಪಥ ಬದಲಾಯಿಸಿ ದಡದ ಹತ್ತಿರ ಬಂದಾಗ, ಅಲೆಗಳ ಅಬ್ಬರಕ್ಕೆ ಸಿಕ್ಕಿ ದಡಕ್ಕೆ ಬಂದು ಬಿದ್ದಿರುವ ಸಾಧ್ಯತೆಗಳಿವೆ. ಒಟ್ಟಾರೆ ಈ ಭಾಗದ ಮತ್ಸ್ಯಪ್ರಿಯರು ಕೈಗೆ ಸಿಕ್ಕಷ್ಟು ಮೀನನ್ನು ಮನೆಗೆ ಹೊತ್ತೊಯ್ದ ಪ್ರಸಂಗ ನಡೆಯಿತು.

Edited By : Manjunath H D
PublicNext

PublicNext

19/09/2022 09:10 pm

Cinque Terre

10.05 K

Cinque Terre

1

ಸಂಬಂಧಿತ ಸುದ್ದಿ