ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ದರ್ಗಾ ರಸ್ತೆ ಬಳಿ ಶನಿವಾರ ರಾತ್ರಿ ಬೀಸಿದ ಗಾಳಿ ಹಾಗೂ ಮಳೆಗೆ ಸ್ಥಳೀಯ ನಿವಾಸಿ ನಾರಾಯಣ ಅಮೀನ್ ಎಂಬವರ ಮನೆ ಮೇಲೆ ಮರ ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮಧ್ಯರಾತ್ರಿ ಸುಮಾರು ಒಂದುವರೆ ಗಂಟೆಗೆ ಭಾರಿ ಗಾಳಿ ಮಳೆಗೆ ಮನೆಯ ಮೇಲೆ ಬೃಹದಾಕಾರದ ಮರ ಬಿದ್ದು ಭಾರಿ ಶಬ್ದ ಉಂಟಾಗಿ ಮನೆಗೆ ಹಾನಿ ಸಂಭವಿಸಿದ್ದು ಮನೆಯೊಳಗೆ ಇದ್ದ ಏಳು ಜನ ಪವಾಡ ಸದೃಶ ಪಾರಾಗಿದ್ದಾರೆ.
ಸ್ಥಳಕ್ಕೆ ಗ್ರಾಮ ಉಪಾಧ್ಯಕ್ಷ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಮಾಜಿ ಸದಸ್ಯ ಶರೀಫ್ ಕಿಲ್ಪಾಡಿ, ಮುಲ್ಕಿ ನಪಂ ಸದಸ್ಯ ಪುತ್ತು ಬಾವ ಭೇಟಿ ನೀಡಿ ಪರಿಶೀಲಿಸಿದ್ದು, ಮರ ತೆರವು ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಅನೇಕ ಅಪಾಯಕಾರಿ ಮರಗಳಿದ್ದು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
28/08/2022 06:40 pm