ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಳಿವಿನಂಚಿನಲ್ಲಿರುವ ಶ್ರೀತಾಳೆ ಮರದ 75 ಸಾವಿರ ಬೀಜ ವಿತರಣೆ

ಉಡುಪಿ: ಪ್ರಾಚ್ಯ ಸಂಶೋಧನಾ ಕೇಂದ್ರದಿಂದ "ಒಪ್ಪಿಕೋ ಪಚ್ಚೆ ವನಸಿರಿ" ಅಭಿಯಾನದಡಿ ಗ್ರೀನ್ ಇಂಡಿಯಾ ಇಕೋ ಸ್ಟಡೀಸ್ ಗ್ರೇಟ್ ಟೀಂ ಆಶ್ರಯದಲ್ಲಿ ಅಳಿ ವಂಚಿನಲ್ಲಿರುವ ಶ್ರೀತಾಳೆ ಮರದ 75 ಸಾವಿರ ಬೀಜವನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಕೇಂದ್ರದ ಅಧ್ಯಕ್ಷ ಎಸ್.ಎ.ಕೃಷ್ಣಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಶಾಲೆ, ಶಿಕ್ಷಣ ಸಂಸ್ಥೆ ಸಂಘ ಸಂಸ್ಥೆ ದೇವಸ್ಥಾನಗಳಿಗೆ 75 ಸಾವಿರ ಗಿಡಗಳನ್ನು ವಿತರಿಸಲಾಗುವುದು. ಶ್ರೀತಾಳೆ ಮರದ ಬಗ್ಗೆ ಇರುವ ಮೂಢನಂಬಿಕೆ ಹೋಗಲಾಡಿಸಿ ಜಾಗೃತಿ ಮೂಡಿಸುತ್ತಿದ್ದೇವೆ. ಶ್ರೀತಾಳೆ ಗಿಡಗಳನ್ನು ನೆಡುವ ಮೂಲಕ ಭೂಕುಸಿತ ನಿಯಂತ್ರಣ ಸಾಧ್ಯವಿದೆ. ಬೇರೆ ಬೇರೆ ಭಾಗದ ಸಾರ್ವಜನಿಕ ಪ್ರದೇಶಗಳಲ್ಲಿ ಶ್ರೀತಾಳೆ ಬೀಜ ವಿತರಿಸುವ ಕಾಠ್ಯಕ್ರಮ ನಡೆಯಲಿದೆ ಎಂದರು. ಕೇಂದ್ರದ ಪ್ರಮುಖರಾದ ಶ್ರೀಧರ್ ಭಟ್, ಪ್ರೊ, ಎಂ.ಎಲ್. ಸಾಮಗ, ಗಣೇಶ್‌ ರಾಜ್ ಸರಳೇಬೆಟ್ಟು ಸುದ್ದಿಗೋಷ್ಠಿಯಲ್ಲಿದ್ದರು.

Edited By : Manjunath H D
Kshetra Samachara

Kshetra Samachara

16/08/2022 01:19 pm

Cinque Terre

10.2 K

Cinque Terre

0

ಸಂಬಂಧಿತ ಸುದ್ದಿ