ಮಂಗಳೂರು: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಸುರಿದಿದೆ. ಹೀಗಾಗಿ ಕೆಲವೆಡೆ ಅವಾಂತರ ಉಂಟಾಗಿದ್ದುರಸ್ತೆಗೆ ಭಾರಿ ಗಾತ್ರದ ಮರಗಳು ಉರುಳಿದ ಘಟನೆ ನಗರದ ರೋಝಾರಿಯೋ ರಸ್ತೆಯಲ್ಲಿ ನಡೆದಿದೆ.
ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು ಲಾರಿ ಮೇಲೆ ಮರ ಉರುಳಿ ಬಿದ್ದಿದೆ. ಚಾಲಕ ಪಾರಾಗಿದ್ದಾನೆ. ಮರ ಬೀಳುತ್ತಿದ್ದಂತೆ ಲಾರಿಯಿಂದ ಚಾಲಕ ಪುರುಷೋತ್ತಮ ಎಂಬುವವರು ಹಾರಿ ಪಾರಾಗಿದ್ದಾರೆ. BSNL ಆವರಣದಿಂದ ಕಾಂಪೌಂಡ್ ವಾಲ್ ಸಮೇತ ಮರ ಉರುಳಿ ಬಿದ್ದಿದೆ.
ಹೀಗಾಗಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಗೆ ಭಾರೀ ಹಾನಿಯಾಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ತೆರವು ಕಾರ್ಯಾಚರಣೆ ನಡೆಸಿದರು.
Kshetra Samachara
09/03/2022 01:00 pm