ಉಡುಪಿ: ಜಿಲ್ಲೆಯಾದ್ಯಂತ ಹಲವೆಡೆ ಮಳೆಯಿಂದ ಭತ್ತದ ಬೆಳೆ ಹಾನಿಗೆ ನಷ್ಟ ಪರಿಹಾರ ಹಾಗೂ ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ನೀಡಲು ಆಮ್ ಆದ್ಮಿ ಪಾರ್ಟಿಯಿಂದ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಒತ್ತಾಯಿಸಿ ಮನವಿ ನೀಡಲಾಯಿತು.
ಉಡುಪಿ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಅಲ್ಲಲ್ಲಿ ಭತ್ತದ ಬೆಳೆ ಪೈರು ಹಾನಿಯಾದ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ನಿಯೋಗವು, ಜಿಲ್ಲಾ ಸಂಘಟನಾ ಮುಖ್ಯಸ್ಣತರಾದ ಸ್ಟೀಫನ್ ರಿಚರ್ಡ್ ಲೋಬೋ ನೇತೃತ್ವದಲ್ಲಿ , ಕಾಪು ಕ್ಷೇತ್ರದ ಹಿರಿಯ ನಾಯಕ ಸುರೇಶ್ ಭಂಡಾರಿ, ಜಿಲ್ಲಾ ಸಂಯೋಜಕ ಆಶ್ಲಿ ಕೊರ್ನೆಲಿಯೋ, ಮಾದ್ಯಮ ಮುಖ್ಯಸ್ಥೆ ಹಿಲ್ಡಾ ಡಿಸೋಜ, ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಜೈಕಿಶನ್ ಪೂಜಾರಿ, ಸದಸ್ಯರಾದ ಒಲಿವರ್ ಡಿಸೋಜ, ಕಾಪುವಿನ ಹರೀಶ್, ವಿಜಯಾನಂದ ಪಾಂಗಳ ಹಾಗೂ ಇನ್ನಿತರ ಸದಸ್ಯರು ಸಂತ್ರಸ್ತ ರೈತರನ್ನು ಭೇಟಿಯಾದರು. ಮಳೆಯಿಂದ ಬೆಳೆ ಹಾನಿಗೀಡಾದ ಪ್ರದೇಶದ ಕೆಲವು ರೈತರನ್ನು ಭೇಟಿ ಮಾಡಿ, ಪರಿಸ್ಥಿತಿ ಪರಿಶೀಲಿಸಿ, ಅಧ್ಯಯನ ನಡೆಸಿದ್ದು ಆಡಳಿತವೂ ಸರಿಯಾಗಿ ಹಾನಿ ಪ್ರಮಾಣದ ಸರ್ವೇ ನಡೆಸಿ ರೈತರ ಸಂಕಷ್ಟಕ್ಕೆ ಸೂಕ್ತವಾದ ಪರಿಹಾರವನ್ನು ತಕ್ಷಣ ಒದಗಿಸಬೇಕಿದು ಎಂದು ಆಗ್ರಹಿಸಿತು.
ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕದೆ ಭತ್ತದ ರೈತರಿಗೆ ನಷ್ಟ ತಪ್ಪಿಸಲು, ಭತ್ತಕ್ಕೆ ನ್ಯಾಯಯುತ ಬೆಂಬಲ ಬೆಲೆ ದೊರಕುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿತು.
Kshetra Samachara
20/11/2021 05:02 pm