ಉಡುಪಿ: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಉತ್ತಮ ಮಳೆಯಾಗುತ್ತಿದೆ. ನಿನ್ನೆ ಸಂಜೆ ಐದು ಗಂಟೆ ಹೊತ್ತಿಗೆ ಪ್ರಾರಂಭಗೊಂಡ ಮಳೆ, ರಾತ್ರಿ ತನಕವೂ ಮುಂದುವರೆದಿತ್ತು. ಇವತ್ತು ಅಪರಾಹ್ನ ಮೂರೂವರೆ ಹೊತ್ತಿಗೆ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಹಬ್ಬದ ದಿನ ಸಂಜೆ ವೇಳೆಗೆ ಜನ ಕುಟುಂಬ ಸಮೇತ ಹೊರ ಹೋಗುವುದು ಸಾಮಾನ್ಯ. ಆದರೆ, ಜಿಲ್ಲೆಯಲ್ಲಿ ಸದ್ಯ ಕುಂಭದ್ರೋಣ ಮಳೆಯಾಗುತ್ತಿದ್ದು, ಹಬ್ಬದ ಸಂಭ್ರಮ ಕಳೆಗುಂದಿದೆ.
ಇಂದು ಬೆಳಗ್ಗಿನಿಂದಲೇ ಕೃಷ್ಣನಗರಿಯಲ್ಲಿ ಮೋಡ ಮುಸುಕಿದ ವಾತಾವರಣ ನೆಲೆಸಿತ್ತು. ಸದ್ಯ ಇಡೀ ಜಿಲ್ಲೆಯಲ್ಲಿ ನಾಲ್ಕು ಗಂಟೆ ಹೊತ್ತಿಗೇ ಕತ್ತಲಾವರಿಸಿದೆ. ಹೀಗಾಗಿ ಎರಡನೇ ದಿನದ ಹಬ್ಬದ ಖುಷಿ- ಸಂಭ್ರಮಕ್ಕೂ ವರುಣ ತಣ್ಣೀರೆರಚಿದ್ದಾನೆ.
Kshetra Samachara
04/11/2021 07:02 pm