ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಿರಂತರ ಮಳೆ ತಂದ ಬವಣೆ; ಕಟ್ಟಿ ನಿಂತ ನೀರು, ಜನ ಹೈರಾಣ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿನ್ನೆಯಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿನ್ನೆ ಮಧ್ಯಾಹ್ನ ಪ್ರಾರಂಭಗೊಂಡ ಮಳೆಯ ಅಬ್ಬರ ರಾತ್ರಿ ಕೂಡ ಕಡಿಮೆಯಾಗಿಲ್ಲ.

ಮುಂಜಾವ ಸಮಯ ಮಳೆ ಬಿರುಸು ಕಳೆದುಕೊಂಡಿದ್ದರೂ ಕೃತಕ ನೆರೆಯಿಂದಾಗಿ ಹಲವೆಡೆ ಸಮಸ್ಯೆಯಾಗಿದೆ. ನಗರದ ಕೃಷ್ಣಮಠದ ಪಾರ್ಕಿಂಗ್ ಸ್ಥಳ ,ಬೈಲಕೆರೆಯಲ್ಲಿ ಕೃತಕ ನೆರೆ ನೀರು ನಿಂತಿರುವುದರಿಂದ ವಾಹನ ಸಂಚಾರಿಗಳಿಗೆ, ಪಾದಚಾರಿಗಳಿಗೆ ಸಮಸ್ಯೆಯಾಗಿದೆ.

ಬ್ರಹ್ಮಾವರ ಸಮೀಪದ ಚಾಂತಾರು ರೈಲ್ವೆ ಬ್ರಿಡ್ಜ್ ನಲ್ಲಿ ಮಳೆ ನೀರು ನಿಂತಿದೆ. ಜುಲೈ ತಿಂಗಳನ್ನು‌ ನೆನಪಿಸುವ ಮಳೆಯಿಂದಾಗಿ ಜಿಲ್ಲೆಯ ಹಲವು ತಗ್ಗುಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ. ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ದ.ಕ. ಜಿಲ್ಲೆಯಲ್ಲೂ ನಿರಂತರ ಮಳೆಯಾಗುತ್ತಿದೆ. ಒಟ್ಟಾರೆ ಅಕಾಲಿಕ ಮಳೆಯಿಂದಾಗಿ ಜನರು ಪರದಾಡುವಂತಾಗಿದೆ.

Edited By : Shivu K
Kshetra Samachara

Kshetra Samachara

13/10/2021 09:54 am

Cinque Terre

19.02 K

Cinque Terre

0

ಸಂಬಂಧಿತ ಸುದ್ದಿ