ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವೀಕೆಂಡ್ ಕರ್ಪ್ಯೂ ತೆರವು ಎಫೆಕ್ಟ್: ಮರವಂತೆ ಬೀಚ್ ನಲ್ಲಿ ಪ್ರವಾಸಿಗರ ದಂಡು!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ವಾರದಿಂದ ವೀಕೆಂಡ್ ಕರ್ಪ್ಯೂ ತೆರವುಗೊಂಡಿದ್ದು ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿವೆ.ಇದರ ಪರಿಣಾಮವಾಗಿ ಬೈಂದೂರು ತಾಲೂಕಿನ ಮರವಂತೆ ಬೀಚ್ ನಲ್ಲಿ ಹೊರಜಿಲ್ಲೆ ಮತ್ತು ಹೊರರಾಜ್ಯದ ಪ್ರವಾಸಿಗರು

ಇವತ್ತು ಮೋಜು ಮಸ್ತಿಯಲ್ಲಿ ತೊಡಗಿಕೊಂಡ ದೃಶ್ಯ ಕಂಡುಬಂತು.

ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದರು.

ಕೊರೋನಾ ಮೂರನೆ ಅಲೆಯ ಆತಂಕ ಇದ್ದರೂ ಜಿಲ್ಲೆಯಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ.

ವಿಕೆಂಡ್ ರಜೆಗಳಲ್ಲಿ ಮೋಜು ಮಸ್ತಿಗಾಗಿ ಹೊರ ಜಿಲ್ಲೆ ,ರಾಜ್ಯದ ಪ್ರವಾಸಿಗರು ಇಲ್ಲಿಗೆ ಬರುತ್ತಲೇ ಇರುತ್ತಾರೆ.ಕೋವಿಡ್ ಗೈಡ್ ಲೈನ್ಸ್ ಇದ್ದರೂ ಬೀಚ್ ಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿಯೇ ಪರಿಣಮಿಸಿದೆ.

Edited By : Nagesh Gaonkar
Kshetra Samachara

Kshetra Samachara

12/09/2021 07:00 pm

Cinque Terre

15.26 K

Cinque Terre

2

ಸಂಬಂಧಿತ ಸುದ್ದಿ