ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಗಂಧ ಮತ್ತು ರಕ್ತಚಂದನ ಗಿಡ ನೆಟ್ಟು ಪರಿಸರ ಸ್ನೇಹಿಯಾದ ಬ್ರಹ್ಮಾವರ ಪೊಲೀಸರು

ಬ್ರಹ್ಮಾವರ: ಬ್ರಹ್ಮಾವರ ರಿಪೇನ್ಸ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ , ಎಸ್.ಡಿ.ಪಿ ರೂರಲ್ ಅಭಿವೃದ್ಧಿ ಸೊಸೈಟಿ, ನಗರ ಪೊಲೀಸರು ಠಾಣಾಧಿಕಾರಿಗಳ ಕಛೇರಿ ಬ್ರಹ್ಮವಾರ ಇವರ ಸಂಯುಕ್ತ ಆಶ್ರಯದಲ್ಲಿ " ಪ್ಲ್ಯಾಂಟ್ ಪೋರ್ ದಿ ನೇಶನ್" ( ಸ್ಯಾಂಡಲ್ ವುಡ್ ಪ್ಲ್ಯಾಂಟೇಶನ್ ) ವಿನೂತನ ಕಾರ್ಯಕ್ರಮ ಬ್ರಹ್ಮಾವರ ಪೊಲೀಸ್ ಸ್ಟೇಶನ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.

ಉಡುಪಿ ಜಿಲ್ಲಾ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಮತ್ತು ಬ್ರಹ್ಮಾವರ ಪೊಲೀಸ್ ಸ್ಟೇಶನ್ ಉಪ ನಿರೀಕ್ಷಕ ಗುರುನಾಥ್ ಬಿ ಹಾದಿಮನಿ ರಕ್ತ ಚಂದನ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಮಯದಲ್ಲಿ ರಿಪೇನ್ಸ್ ಹೆಲ್ತ್‌ಕೇರ್ ಕಂಪನಿಯ ಮುಖ್ಯಸ್ಥ ಹಾಗೂ ನಿರ್ದೇಶಕರಾದ ಪವನ್ ಶೆಟ್ಟಿ ,ಎಸ್.ಡಿ.ಪಿ ರೂರಲ್ ಡೆವಲಾಪಮೆಂಟ್ ಸೊಸೈಟಿಯ ನಿರ್ದೇಶಕರಾಗಿರುವ ಎಸ್.ಬಿ ಶೆಟ್ಟಿ, ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು. ಬ್ರಹ್ಮಾವರ ಕೆ.ವಿ.ಕೆ ಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಆಗಿರುವ ಡಾ.ಬಿ ಧನಂಜಯ, ಹಾಗೂ ಬ್ರಹ್ಮಾವರ ಉಪ ವಲಯ ಅರಣ್ಯಾಧಿಕಾರಿ ಹರೀಶ್, ರಕ್ತ ಚಂದನ ಬೆಳೆಗಾರರು, ರೈತರು ಆಗಿರುವ ಪುಟ್ಟಯ್ಯ ಶೆಟ್ಟಿ, ಹಿರಿಯರಾದ ಕರುಣಾಕರ ಶೆಟ್ಟಿ, ಬ್ರಹ್ಮಾವರ ಪೊಲೀಸ್ ಸ್ಟೇಶನ್ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

14/08/2021 03:20 pm

Cinque Terre

6.68 K

Cinque Terre

0

ಸಂಬಂಧಿತ ಸುದ್ದಿ