ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಬೀಚ್ ನಲ್ಲಿ ಸ್ವಚ್ಛ ಸಾಗರ, ಸುರಕ್ಷಿತ ಸಾಗರ ಅಭಿಯಾನ; ನೂರಾರು ಜನರಿಂದ ಕಡಲಕಿನಾರೆ ಸ್ವಚ್ಛತೆ

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸಮುದ್ರ ತೀರವನ್ನು ಸ್ವಚ್ಚಗೊಳಿಸುವುದರೊಂದಿಗೆ ಜನರಲ್ಲಿ ಸ್ಚಚ್ಛ ಹಾಗೂ ಸುರಕ್ಷಿತ ಸಾಗರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಚ ಸಾಗರ ಸುರಕ್ಷಿತ ಸಾಗರ ಅಭಿಯಾನ ನಡೆಯುತ್ತಿದೆ.

ವಿನೂತನ ಶೈಲಿಯ 75 ದಿನಗಳ ಸುದೀರ್ಘ ಕಾರ್ಯಕ್ರಮಕ್ಕೆ ಈಗಾಗಲೇ ಜುಲೈ 3 ರಂದು ಚಾಲನೆ ನೀಡಲಾಗಿದೆ.ಇದರ ಭಾಗವಾಗಿ ಇವತ್ತು ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಮಲ್ಪೆಯಲ್ಲಿ ಬೀಚ್ ಸ್ವಚ್ಛತೆ ನಡೆಯಿತು.ಬೆಳಿಗ್ಗೆ ಮಲ್ಪೆ ಬೀಚ್ನಲ್ಲಿ ನಡೆದ ಸ್ಚಚ್ಛ ಸಾಗರ, ಸುರಕ್ಷಿತ ಸಾಗರ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್. ಎಂ. ಉದ್ಘಾಟಿಸಿದರು.

ಅಭಿಯಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ,

ಪ್ರವಾಸಿಗರಲ್ಲಿ, ಮೀನುಗಾರ ಸಮುದಾಯಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಸಮುದ್ರ ತೀರಗಳಲ್ಲಿ ಎಸೆಯಲ್ಪಡುವ ತ್ಯಾಜ್ಯಗಳಿಂದಾಗಿ ಸಮುದ್ರ ಪರಿಸರದ ಮೇಲೆ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

ಪೌರಕಾರ್ಮಿಕರು ,ವಿದ್ಯಾರ್ಥಿಗಳು ,ಕರಾವಳಿ ಕಾವಲುಪಡೆ ಪೊಲೀಸರು ಸಹಿತ ನೂರಾರು ಜನ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದರು.

Edited By :
PublicNext

PublicNext

17/09/2022 05:13 pm

Cinque Terre

36.55 K

Cinque Terre

1

ಸಂಬಂಧಿತ ಸುದ್ದಿ