ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ಅವರು ಜೀವಂತ ನಾಗರ ಹಾವಿಗೆ ತನು ಎರೆದು, ಆರತಿ ಬೆಳಗಿಸಿ ನಾಗರಪಂಚಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಮಂಗಳವಾರ ಆಚರಿಸಿದರು.
ಪ್ರತೀ ವರ್ಷ ನಾಗರ ಪಂಚಮಿಯಂದು ತನ್ನ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ತನು ಎರೆಯುವ ಗೋವರ್ಧನ ಭಟ್ ಅವರು ಈ ಬಾರಿ ಒಂದು ಹಾವಿಗೆ ಮನೆಯವರ ಜತೆಗೂಡಿ ತನು ಎರೆದು, ಪೂಜೆ ಮಾಡಿ, ನಾಗರ ಪಂಚಮಿ ಆಚರಿಸಿದರು.
ಕಾಪು ಪರಿಸದಲ್ಲಿ ಅಪಾಯಕ್ಕೆ ಸಿಲುಕಿ ಗಾಯಗೊಳ್ಳುವ ನಾಗರ ಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡಿ, ಆರೈಕೆ ಮಾಡುವ ಕಾಯಕದಲ್ಲಿ ನಿರತರಾಗಿರುವ ಗೋವರ್ಧನ ಭಟ್ ಅವರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದು, ಕೇಟರಿಂಗ್ ಉದ್ಯಮ ನಡೆಸುತ್ತಿದ್ದಾರೆ. ಉರಗ ಪ್ರೇಮಿಯಾಗಿರುವ ಅವರು ಸಾವಿರಾರು ಹಾವುಗಳಿಗೆ ಮರು ಜನ್ಮ ನೀಡಿದ್ದು, ತಮ್ಮ ಆರೈಕೆಯಲ್ಲಿ ಚೇತರಿಸಿಕೊಂಡ ಹಾವುಗಳನ್ನು ಮರಳಿ ನಾಗ ಬನ, ಕಾಡಿನಲ್ಲಿ ಬಿಟ್ಟು ಬರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
PublicNext
02/08/2022 12:43 pm