ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ರಸ್ತೆ ಅವ್ಯವಸ್ಥೆಗೆ ಖಂಡನೆ: ನಾಗರಿಕರಿಂದ ವಿಶಿಷ್ಟ ರೀತಿಯ ಪ್ರತಿಭಟನೆ

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ಮೂರು ಮಾರ್ಗದಿಂದ ಆನೆಕೆರೆ ಮಸೀದಿವರೆಗಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಕಾರ್ಕಳದಲ್ಲಿ ನಾಗರಿಕರು ಹಾಗೂ ವಾಹನ ಚಾಲಕರು ಶನಿವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಕಳ ಪುರಸಭಾ ಸದಸ್ಯ ಶುಭದ್ ರಾವ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶುಭದ್ ರಾವ್, ಕಾರ್ಕಳ ಬಸ್ ನಿಲ್ದಾಣದಿಂದ ಆನೆಕೆರೆವರೆಗಿನ ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ನಡೆಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಮಹಾವೀರ್ ಹೆಗಡೆ ಪತ್ರಿಕಾ ಹೇಳಿಕೆ ನೀಡಿದ್ರು. ಒಂದು ವೇಳೆ ಅವರು ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರೆ ಬಹಿರಂಗವಾಗಿ ಹೂಮಾಲೆ ಹಾಕಿ ಅಭಿನಂದಿಸುವುದಾಗಿ ಸವಾಲು ಹಾಕಿದರು. ಚಿನ್ನದ ರಸ್ತೆ ಮಾಡುವುದಾಗಿ ಹೇಳಿದವರು ಕಾರ್ಕಳ ಜನರಿಗೆ ಹೊಂಡ ಭಾಗ್ಯ, ಕೆಸರು ನೀರಿನ ಭಾಗ್ಯ ನೀಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.

ಈ ಪ್ರತಿಭಟನೆಯಲ್ಲಿ ಕೋಣಗಳು ಹಾಗೂ ಚಂಡೆ ವಾದಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಾರ್ಕಳದ ಬಸ್ ನಿಲ್ದಾಣದಿಂದ ಕಾಮಧೇನು ಹೋಟೆಲ್ ವರೆಗೆ ಪ್ರತಿಭಟನೆ ಸಾಗಿ ಬಂದಿತ್ತು. ಈ ಪ್ರತಿಭಟನೆಗೆ ರಿಕ್ಷಾ ಟ್ಯಾಕ್ಸಿ ಹಾಗೂ ಸಾಗಾಣಿಕ ವಾಹನ ಚಾಲಕರು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

17/09/2022 02:00 pm

Cinque Terre

4.94 K

Cinque Terre

1

ಸಂಬಂಧಿತ ಸುದ್ದಿ