ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಹೊಂಡಗುಂಡಿಗಳೇ ತುಂಬಿದ ರಾಜ್ಯ ಹೆದ್ದಾರಿ: ವಾಹನ ಸವಾರರ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ

ಬಜಪೆ: ಕೆಂಜಾರು ಹಾಗೂ ಮರವೂರು ಮೂಲಕ ಮಂಗಳೂರಿಗೆ ಸಾಗುವಂತಹ ರಾಜ್ಯ ಹೆದ್ದಾರಿಯ ಬಜಪೆಯಲ್ಲಿ ರಾಜ್ಯ ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು ಉಂಟಾಗಿದ್ವು. ಕೆಲ ತಿಂಗಳುಗಳು ಕಳೆದರೂ ಹೊಂಡವನ್ನು ಮುಚ್ಚುವ ಕಾರ್ಯ ಮಾತ್ರ ಆಗಲಿಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿ ದಿನಂಪ್ರತಿ ಸಂಚರಿಸುವಂತಹ ವಾಹನ ಸವಾರರು ಪಟ್ಟಂತಹ ಕಷ್ಟ ಅಷ್ಟಿಷ್ಟಲ್ಲ.

ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಂದರ್ಭ ಹೊಂಡದಲ್ಲಿ ಬಿದ್ದು ಗಾಯಗೊಂಡ ಘಟನೆಯೂ ನಡೆದಿತ್ತು. ಹೆದ್ದಾರಿಯಲ್ಲಿನ ಹೊಂಡಗುಂಡಿಗಳ ಬಗ್ಗೆ ವಾಹನ ಸವಾರರು ಪಡುವಂತಹ ಸಮಸ್ಯೆಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಕೂಡ ಬಿತ್ತರವಾಗಿತ್ತು.

ಇದೀಗ ಹೆದ್ದಾರಿಯಲ್ಲಿನ ದೊಡ್ಡ ಗಾತ್ರದ ಹೊಂಡಗಳಿಗೆ ಜಲ್ಲಿ ಹುಡಿಗಳನ್ನು ಹಾಕಿ ಹೊಂಡವನ್ನು ಮುಚ್ಚುವ ಕಾರ್ಯ ನಡೆದಿದ್ದು, ಹೆದ್ದಾರಿಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ತಾತ್ಕಾಲಿಕ ಮುಕ್ತಿ ದೊರಕಿದಂತಾಗಿದೆ.

Edited By :
Kshetra Samachara

Kshetra Samachara

16/07/2022 01:42 pm

Cinque Terre

9 K

Cinque Terre

1

ಸಂಬಂಧಿತ ಸುದ್ದಿ