ಉಪ್ಪಿನಂಗಡಿ: ಬಿ.ಸಿ.ರೋಡ್- ಅಡ್ಡಹೊಳೆ ಚತುಷ್ಪಥ ಕಾಮಗಾರಿಯು ಉಪ್ಪಿನಂಗಡಿ ಭಾಗದಲ್ಲಿ ನಡೆಯುತ್ತಿದೆ. ಮುಂಗಾರು ಆಗಮನದ ಬಳಿಕದ ಮೊದಲ ಭಾರಿ ಮಳೆಗೆ ಈ ಭಾಗದಲ್ಲಿ ರಸ್ತೆ ಜಲಾವೃತಗೊಳ್ಳುವಂತಾಗಿದೆ. ಅಲ್ಲದೆ, ಅಂಗಡಿ, ಕೃಷಿ ತೋಟಗಳಿಗೆ ನೀರು ನುಗ್ಗುವಂತಾಗಿದೆ.
ಹೆದ್ದಾರಿ ಅಗಲೀಕರಣ ಕಾಮಗಾರಿ ಸಂದರ್ಭ ರಸ್ತೆ ಬದಿಯಲ್ಲಿರುವ ಚರಂಡಿಯನ್ನೆಲ್ಲ ಮುಚ್ಚಿ ಹಾಕಲಾಗಿದೆ. ಭಾನುವಾರ ಈ ಭಾಗದಲ್ಲಿ ಸುರಿದ ಭಾರಿ ಮಳೆಗೆ ನೀರು ಸರಾಗವಾಗಿ ಹರಿಯಲು ಚರಂಡಿ ಇಲ್ಲದೆ ಹೆದ್ದಾರಿ, ಕೃಷಿ ತೋಟಕ್ಕೆ ಮಳೆ ನೀರು ನುಗ್ಗುವಂತಾಯಿತು. 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು, ಬಜತ್ತೂರು ಗ್ರಾಮದ ಬಾರಿಕೆ, ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಜಲಾವೃತಗೊಂಡರೆ, ಹೆದ್ದಾರಿಯಿಂದ ನಟ್ಟಿಬೈಲು ಸಂಪರ್ಕಿಸುವ ಅಡ್ಡ ರಸ್ತೆ, ಕೃಷಿ ಭೂಮಿಗಳು ಜಲಾವೃತಗೊಂಡವು. ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಸತೀಶ್ ನಾಯಕ್ ಅವರ ದಿನಸಿ ಸಾಮಗ್ರಿ ದಾಸ್ತಾನಿನ ಗೋದಾಮಿಗೆ ಹಾಗೂ ಅಶ್ವಿನಿ ಎಲೆಕ್ಟ್ರಾನಿಕ್ಸ್ ನೆಲಮಹಡಿಯಲ್ಲಿರುವ ಗೋಡಾನ್‌ಗೆ ನೀರು ನುಗ್ಗಿತ್ತು.
Kshetra Samachara
12/06/2022 10:17 pm