ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೊಲ್ನಾಡು ವಿದ್ಯುತ್ ಸಬ್ ಸ್ಟೇಷನ್ ಬಳಿ ರಸ್ತೆ ಹೊಂಡಮಯ ವಾಗಿದ್ದು ಸಂಚಾರ ದುಸ್ತರವಾಗಿದೆ.
ಮುಲ್ಕಿ ನಗರ ಪಂಚಾಯತ್ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕೊಲ್ನಾಡು ವಿದ್ಯುತ್ ಸಬ್ ಸ್ಟೇಷನ್ ನಿಂದ ಕಳೆದ ಕೆಲ ತಿಂಗಳ ಹಿಂದೆ ಭೂಗತ ವಿದ್ಯುತ್ ಕೇಬಲ್ ಗಳನ್ನು ಕಿನ್ನಿಗೋಳಿ ಗುತ್ತಗಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಐಡಿಯಲ್ ಐಸ್ ಕ್ರೀಂ ಪ್ಲಾಂಟ್ ಗೆ ಅಳವಡಿಸುವ ಕಾರ್ಯ ನಡೆದಿದ್ದು ಅರ್ಧಂಬರ್ಧ ಕಾಮಗಾರಿಯಿಂದ ರಸ್ತೆ ಹೊಂಡಮಯ ವಾಗಿ ಪರಿಣಮಿಸಿದೆ.
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದಿಂದ ಮಂಗಳೂರು ಸುರತ್ಕಲ್ ಕಡೆ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಧಾನ ರಸ್ತೆ ಇದಾಗಿದ್ದು ಕೂಡಲೇ ಮುಲ್ಕಿ ನಗರ ಪಂಚಾಯತ್ ರಸ್ತೆ ದುರಸ್ತಿ ಪಡಿಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
29/12/2021 07:45 am