ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಳತ್ತೂರು ಗ್ರಾಮದ ಗುಡ್ಡೆಯಂಗಡಿ ಎಸ್ ಸಿ ಕಾಲೋನಿ ರಸ್ತೆ ಕಳೆದ ಕೆಲ ವರ್ಷಗಳಿಂದ ಡಾಮರೀಕರಣಕ್ಕೆ ಬಕ ಪಕ್ಷಿಯಂತೆ ಕಾಯುತ್ತಿದ್ದು ಸಂಚಾರ ತ್ರಾಸದಾಯಕ ವಾಗಿ ಪರಿಣಮಿಸಿದೆ.
ಈ ಪರಿಸರದ ಎಸ್ಸಿ ಕಾಲೋನಿಯಲ್ಲಿ ಸುಮಾರು ಆರು ಕುಟುಂಬಗಳಿದ್ದು ರಸ್ತೆ ಅವ್ಯವಸ್ಥೆ ಯಿಂದ ಕಂಗಾಲಾಗಿದ್ದಾರೆ ಎಂಬ ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯಿಶ್ ಚೌಟ ಹಾಗೂ ಕಿನ್ನಿಗೋಳಿ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಹೆಗ್ಡೆ ವಿವಿಧ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಈ ಸಂದರ್ಭ ಮುಖ್ಯಾಧಿಕಾರಿ ಮಾತನಾಡಿ ತಾತ್ಕಾಲಿಕ ನೆಲೆಯಲ್ಲಿ ಜೆಸಿಬಿ ಮೂಲಕ ರಸ್ತೆ ದುರಸ್ತಿ ಪಡಿಸಲಾಗುವುದು . ರಸ್ತೆ ಕಾಮಗಾರಿಗೆ ಸುಮಾರು 25 ಲಕ್ಷ ಅನುದಾನ ಪ್ರಸ್ತಾವನೆ ಕೊಟ್ಟಿದ್ದು ಸರಕಾರದಿಂದ ಮಂಜೂರಾದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದರು.
Kshetra Samachara
25/12/2021 08:22 pm