ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಕೊರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಯುಪಿಸಿಎಲ್ ಕಾರ್ಯಾಚರಣೆ ನಿಲ್ಲಿಸಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ಲಭ್ಯವಾಗಿದೆ. ಇಲ್ಲಿ ಪ್ರತಿನಿತ್ಯ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಸರಕಾರದ ಹಳೆ ಬಾಕಿ ಮತ್ತು ಕಲ್ಲಿದ್ದಲು ಸರಬರಾಜು ಕೊರತೆಯಿಂದಾಗಿ ಸದ್ಯ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ಯುಪಿಸಿಎಲ್ ಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 2500 ಕೋಟಿ ರೂ. ಬಾಕಿ ಇಟ್ಟುಕೊಂಡಿದೆ. ಒಂದೆಡೆ
ರಾಜ್ಯ ಸರ್ಕಾರ ಹಣ ಬಾಕಿ ಇಟ್ಟುಕೊಂಡಿದ್ದು, ಮತ್ತೊಂದೆಡೆ ಕಲ್ಲಿದ್ದಲಿನ ಅಭಾವ ತಲೆದೋರಿದೆ.
ಸರಕಾರದ ಬಾಕಿ ಹಣಕ್ಕೆ ಕಾಯುತ್ತಿರುವ ಯುಪಿಸಿಎಲ್ ಸದ್ಯ ಉತ್ಪಾದನೆ ಮಾಡುತ್ತಿಲ್ಲ.
ಮಳೆಗಾಲದಲ್ಲಿ ಕಲ್ಲಿದ್ದಲು ವಿದ್ಯುತ್ ಗೆ ರಾಜ್ಯದಲ್ಲಿ ಬೇಡಿಕೆ ಇರಲಿಲ್ಲ. ಆದರೆ, ಮಳೆಗಾಲ ಮುಗಿದಿದ್ದು ಮುಂದೆ ರಾಜ್ಯದಲ್ಲಿ ವಿದ್ಯುತ್ ಗೆ ಬೇಡಿಕೆ ಹೆಚ್ಚಲಿದೆ. ಸರಕಾರದ ಬಾಕಿ ಹಣ ಪಾವತಿಗಾಗಿ ಯುಪಿಸಿಎಲ್ ಕಾಯುತ್ತಿದ್ದು, ಮುಂದೇನಾಗುತ್ತೋ ಕಾದು ನೋಡಬೇಕಿದೆ.
Kshetra Samachara
08/10/2021 03:00 pm