ಮುಲ್ಕಿ: ಕಳೆದ ಒಂದು ತಿಂಗಳಿನಿಂದ ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಅದಾನಿ ಪೈಪ್ ಲೈನ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು. ಪ್ರಯಾಣಿಕರು ಮತ್ತು ಸ್ಥಳೀಯ ಅಂಗಡಿ ಮಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸೋಮವಾರ ಬಸ್ಸು ನಿಲ್ದಾಣದ ಬಳಿ ಹಗಲುಹೊತ್ತು ಕಾಮಗಾರಿ ನಡೆಯುತ್ತಿದ್ದು ಪೈಪ್ ಲೈನ್ ಕಾಮಗಾರಿಗೆ ತೋಡಿದ ಭಾರಿ ಗಾತ್ರದ ಹೊಂಡದಲ್ಲಿ ಮಳೆ ನೀರು ನಿಂತಿದ್ದು ಜೆಸಿಬಿ ಮೂಲಕ ತೆರವುಗೊಳಿಸಿ ನಿಲ್ದಾಣದ ರಸ್ತೆಯಲ್ಲಿ ಬಿಡುತ್ತಿದ್ದು ರಸ್ತೆ ಕೆಸರುಮಯವಾಗಿದೆ.
ಸೋಮವಾರ ಅಷ್ಟಮಿ ದಿವಸ ಆಚರಣೆಗೆ ಪೇಟೆ ಬ್ಯೂಸಿ ಯಾಗಿದ್ದು ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ನಡೆದಾಡಲು ತೀವ್ರ ತೊಂದರೆಯಾಯಿತು
ನಿಧಾನಗತಿಯ ಕಾಮಗಾರಿ ಬಗ್ಗೆ ಆಟೋ ಚಾಲಕ ಗೋಪಿನಾಥ ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುಲ್ಕಿ ರಾಷ್ಟ್ರೀಯ ಚತುಷ್ಪಥ ಸರ್ವಿಸ್ ರಸ್ತೆ ಇಲ್ಲದೆ ಅನೇಕ ಅಪಘಾತಗಳು ಸಂಭವಿಸಿದ್ದು ಇದೀಗ ಕಳೆದ ಕೆಲವು ದಿನಗಳಿಂದ ಅದಾನಿ ಪೈಪ್ ಲೈನ್ ಕಾಮಗಾರಿ ನಿಧಾನಗತಿ ಕಾಮಗಾರಿಯಿಂದ ನಿಲ್ದಾಣ ಕೆಸರುಮಯವಾಗಿದ್ದು ತೀವ್ರ ತೊಂದರೆಯಾಗಿದೆ ಎಂದರು.
ನಿಲ್ದಾಣ ಕೆಸರು ಮಾಯವಾಗುತ್ತಿದ್ದಂತೆ ಸ್ಥಳೀಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದು ಕೂಡಲೇ ಪೈಪ್ಲೈನ್ ಗುತ್ತಿಗೆದಾರ ಟ್ಯಾಂಕ್ ಮೂಲಕ ನೀರು ತರಿಸಿ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾನೆ.
Kshetra Samachara
30/08/2021 01:38 pm