ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಬಿರುಗಾಳಿ ಮಳೆಗೆ ಕರಾವಳಿ ತತ್ತರ ಐದು ಮನೆಗಳಿಗೆ ಹಾನಿ

ಬೈಂದೂರು: ಭಾನುವಾರ ರಾತ್ರಿ ಬೀಸಿದ ಬಿರುಗಾಳಿಗೆ ಕರಾವಳಿ ತತ್ತರಿಸಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಹಲವಾರು ಮನೆಗಳು ಬಿರುಗಾಳಿ ಹಾಗೂ ಭಾರೀ ಮಳೆಗೆ ಹಾನಿಯಾಗಿವೆ. ಇದರಿಂದ ಮೀನುಗಾರರ ಜೀವನವು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಬೈಂದೂರಿನ ಉಪ್ಪುಂದದ ನಂದನವನ ಗ್ರಾಮದ ಗೋವಿಂದ ಪೂಜಾರಿ ಮನೆ, ಕರ್ಕಿಕಳಿಯ ಅರೆಕಲ್ಲುಮನೆ ಸುರೇಂದ್ರ, ಶೇನುಮನೆ ತಿಮ್ಮಪ್ಪ, ಪಕ್ಕಿ ಮನೆ ಪಾರ್ವತಿ ಹಾಗೂ ಕಟ್ಟಗೇರಿ ದುರ್ಗಯ್ಯನ ಮನೆ ಈಶ್ವರ ಹರಿಕಾಂತರ ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಲ್ಲದೇ ತೆಂಗಿನ ಮರಗಳೂ ಧರಾಶಾಹಿಯಾಗಿವೆ. ಅಲ್ಲದೇ ತಾಲೂಕಿನ ಇತರೆಡೆಗಳಲ್ಲಿಯೂ ಹಾನಿ ಸಂಭವಿಸಿರುವ ಸಾಧ್ಯತೆಗಳಿವೆ.

Edited By : Nagesh Gaonkar
Kshetra Samachara

Kshetra Samachara

12/09/2022 01:05 pm

Cinque Terre

7.45 K

Cinque Terre

0

ಸಂಬಂಧಿತ ಸುದ್ದಿ