ಕಾರ್ಕಳ: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಊರಿನಲ್ಲಿ ಅಹಾರ ಕಿಟ್ ಗಳು ವಿತರಣೆಯಾಗದೆ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ!
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ಗಳು ಬಿಡುಗಡೆಯಾಗಿದ್ದವು. ಆದರೆ ಸಮರ್ಪಕವಾಗಿ ಕಿಟ್ ವಿತರಣೆಯಾಗದೆ ಸಾವಿರಾರು ಕಿಟ್ ಗಳು ಗೋಡೌನಿನಲ್ಲಿ ರಾಶಿ ಬಿದ್ದು ಅದರ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ. ಆಗೊಮ್ಮೆ ಈಗೊಮ್ಮೆ ಬಂದ ಕೆಲವು ಕಾರ್ಮಿಕರಿಗೆ ಗಂಟೆಗಟ್ಟಲೆ ಕಾಯಿಸಿ ಸತಾಯಿಸಿ ಕಿಟ್ ಕೊಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿ ಅಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಶುಭದ ರಾವ್ , ನಮ್ಮ ಸಚಿವರು ಸನ್ಮಾನ, ಅಬಿನಂದನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ.ಸರಕಾರ ತಕ್ಷಣ ಈ ಬಗ್ಗೆ ಗಮನಹರಿಸಿ ಆಹಾರ ಕಿಟ್ ಗಳನ್ನು ಅರ್ಹರಿಗೆ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಬಾರಿ ಬಿಡುಗಡೆಯಾಗಿದ್ದ 5000 ಆಹಾರ ಕಿಟ್‌ಗಳಲ್ಲಿ ಒಂದನ್ನೂ ವಿತರಿಸದೆ ಭ್ರಷ್ಟಾಚಾರ ನಡೆಸಲಾಗಿದೆ.ಈ ಸಂಬಂಧ ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಇದರ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ ಎಂದು ಕಾರ್ಕಳ
ಪುರಸಭಾ ಸದಸ್ಯ ಶುಭದ ರಾವ್ ಹೇಳಿದ್ದಾರೆ.
Kshetra Samachara
25/08/2021 04:27 pm