ಮುಲ್ಕಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಕೊಂಜಾಲಗುತ್ತು ನಿವಾಸಿ ಅಶ್ಪಕ್ ಎಂಬ ಮುಸ್ಲಿಂ ಹುಡುಗ ಗೂಡುದೀಪ ತಯಾರಿಸಿ ಗಮನ ಸೆಳೆದಿದ್ದಾನೆ.
ಮುಸ್ಲಿಂ ಹುಡುಗನಾದರೂ ತುಳು ಸಂಸ್ಕ್ರತಿ ಸಂಸ್ಕಾರದ ಬಗ್ಗೆ ಅಪಾರ ಗೌರವ ಹೊಂದಿದ ಅಶ್ಪಕ್ ದೀಪಾವಳಿ ಬಂತೆಂದರೆ ಗೂಡುದೀಪ ತಯಾರಿಸಲು ತಯಾರಿ ನಡೆಸುತ್ತಾನೆ.
ಕಳೆದ 8 ವರ್ಷದಿಂದ ಗೂಡುದೀಪ ತಯಾರಿಸುತ್ತಿದ್ದು, ಈ ಬಾರಿ 17 ಗೂಡುದೀಪಗಳನ್ನು ತಯಾರಿಸಿದ್ದು, ಸುಮಾರು ಒಂದು ತಿಂಗಳಿನಿಂದ ಈ ಕಾಯಕದಲ್ಲಿ ನಿರತನಾಗಿದ್ದಾನೆ.
ಬಾಗಲಕೋಟೆ ನಿವಾಸಿ ಬಡಕುಟುಂಬದ ಅಶ್ಪಕ್ ನನ್ನು ಶಿಕ್ಷಣ ಕೊಡುವುದಕ್ಕೋಸ್ಕರ 6 ವರ್ಷ ಪ್ರಾಯದಲ್ಲೇ ತಮ್ಮ ಮನೆ ಏಳಿಂಜೆ ಕೋಂಜಾಲಗುತ್ತುಗೆ ಕೌಶಲ್ಯ ಶೆಟ್ಟಿಯವರು ಕರೆ ತಂದಿದ್ದು, ಉತ್ತಮ ಶಿಕ್ಷಣವನ್ನು ನೀಡುತ್ತಿದ್ದಾರೆ. ಬಾಲ್ಯದಿಂದಲೇ ಉತ್ತಮ ಶಾಲೆ- ಕಾಲೇಜು ಮೂಲಕ ಶಿಕ್ಷಣ ನೀಡುತ್ತಿದ್ದು ಪ್ರಸ್ತುತ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾನೆ.
ಶಿಕ್ಷಣದ ಜೊತೆ ಕೃಷಿ ಮತ್ತು ಕೋಳಿ ಸಾಕಾಣಿಕೆಯಲ್ಲೂ ಆಸಕ್ತಿ ಹೊಂದಿದ ಅಶ್ಪಕ್ ಕೃಷಿಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾನೆ. ಕೌಶಲ್ಯ ಶೆಟ್ಟಿಯವರು ನನ್ನನ್ನು ಸಾಕುವುದು ಮಾತ್ರವಲ್ಲದೆ, ನನ್ನ ಶಿಕ್ಷಣದ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ. ಎನ್ನುತ್ತಿದ್ದಾನೆ ಅಶ್ಪಕ್. ಮುಸ್ಲಿಂ ಹುಡುಗ ಅಶ್ಪಕ್ ನ ಗೂಡುದೀಪ ಪ್ರೀತಿ ಅಭಿನಂದನೀಯ.
-ಪುನೀತ್ ಕೃಷ್ಣ, ಪಬ್ಲಿಕ್ ನೆಕ್ಸ್ಟ್, ಮುಲ್ಕಿ
Kshetra Samachara
30/10/2024 06:23 pm