ಮುಲ್ಕಿ: ಸಂಘಟನೆಗಳು ಸ್ವಚ್ಛತೆ ಮೂಲಕ ಜನ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಸ್ವಚ್ಛತೆ ನಿಂತ ನೀರಾಗದೆ ನಿರಂತರವಾಗಿರಲಿ ಎಂದು ತಾಪಂ ಸದಸ್ಯ ದಿವಾಕರ ಕರ್ಕೇರ ಹೇಳಿದರು.
ಅವರು ದ.ಕ. ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮಂಗಳೂರು ತಾಪಂ, ಪಡುಪಣಂಬೂರು ಗ್ರಾಪಂ, ಸ್ವಚ್ಛ ಭಾರತ್ ಮಿಷನ್, ನೆಹರೂ ಯುವ ಕೇಂದ್ರ ಮಂಗಳೂರು,ತೋಕೂರು ಜಿಲ್ಲಾ ಮತ್ತು ರಾಜ್ಯಪ್ರಶಸ್ತಿ ವಿಜೇತ ಯುವಕ ಸಂಘ ತೋಕೂರು, ಮಹಿಳಾ ಮಂಡಲ ತೋಕೂರು, ರೋಟರಿ ಸಮುದಾಯ ದಳ ಆಶ್ರಯದಲ್ಲಿ ಯುವಕ ಸಂಘದ ಸುವರ್ಣ ಸಭಾಂಗಣದಲ್ಲಿ ನಡೆದ ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆ ಸಮಾರೋಪದಲ್ಲಿ ಮಾತನಾಡಿದರು.
ಜಿಪಂ ಸದಸ್ಯ ವಿನೋದ್ ಬೊಳ್ಳೂರು ಅಧ್ಯಕ್ಷತೆ ವಹಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅಂತರ್ಜಲದ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿ ಪಡುಪಣಂಬೂರು ಪಂ. ಕಾರ್ಯದರ್ಶಿ ಲೋಕನಾಥ ಭಂಡಾರಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಬಗ್ಗೆ ಮಾಹಿತಿ ನೀಡಿದರು. ಯುವಕ ಸಂಘ ಸದಸ್ಯ ದಾಮೋದರ ಶೆಟ್ಟಿ, ಭುವನ್ ಡಿ.ಶೆಟ್ಟಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು. ಪಡುಪಣಂಬೂರು ಪಿಡಿಒ ಅನಿತಾ ಕ್ಯಾಥರಿನ್, ಯುವಕ ಸಂಘ ಅಧ್ಯಕ್ಷ ವಿನೋದ್ ಕುಮಾರ್, ವಿಶ್ವಬ್ಯಾಂಕ್ ನೆರವಿನ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿಗಾರ್, ರೋಟರಿ ಸಮುದಾಯ ದಳ ಅಧ್ಯಕ್ಷ ವಿಫುಲ ಡಿ.ಶೆಟ್ಟಿಗಾರ್, ಮಹಿಳಾ ಮಂಡಲ ಅಧ್ಯಕ್ಷ ಅನುಪಮಾ ಎ. ರಾವ್, ಸದಸ್ಯೆ ವಿನೋದಾ ಭಟ್, ಯುವಕ ಸಂಘ ಮಾಜಿ ಅಧ್ಯಕ್ಷ ಹೇಮನಾಥ ಅಮೀನ್ ಉಪಸ್ಥಿತರಿದ್ದರು.
Kshetra Samachara
09/11/2020 09:01 am