ಬೆಂಗಳೂರು: ಜೆಜೆ ನಗರದ ರೌಡಿಶೀಟರ್ ಫರ್ವೇಜ್‌ಗೆ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದಾರೆ. ಸಿದ್ದಾಪುರ ಇನ್ಸ್ಪೆಕ್ಟರ್ ಅಂಥೋನಿ ರಾಜ್, ತಲಘಟ್ಟಪುರದ 6th ಸ್ಟೇಜ್ ಬಳಿ ಫರ್ವೇಜ್ ಕಾಲಿಗೆ ಗುಂಡು ಹೊಡೆದಿದ್ದಾರೆ.
ಹೌದು ಫರ್ವೇಜ್ ಅಂತಿಂತ ಆಸಾಮಿ ಅಲ್ಲ. ದಾರಿಹೋಕರನ್ನ ಸುಲಿಗೇನೂ ಮಾಡುತ್ತಿದ್ದ.ಅವರ ಮೊಬೈಲ್ ಅನ್ನೂ ಕಿತ್ತುಕೊಂಡು ಹೋಗುತ್ತಿದ್ದ. ಡಿಸೆಂಬರ್-30 ರಂದು ಲಾಲ್ ಬಾಗ್ ಬಳಿ ಕೇರಳದ ವ್ಯಕ್ತಿಯನ್ನ ಸುಲಿಗೆ ಮಾಡಿದ್ದ. ಚಾಕುವಿನಿಂದಲೂ ಇರಿದು ಹೋಗಿದ್ದ.
ಈ ಹಿನ್ನೆಲೆಯಲ್ಲಿಯೇ ಇನ್ಸ್ಪೆಕ್ಟರ್ ಅಂಥೋನಿ ರಾಜ್ ಅರೆಸ್ಟ್ ಮಾಡಲು ಹೋಗಿದ್ದರು. ಆದರೆ ಆಗ ಕಾನ್ಸ್ಟೇಬಲ್ ಮೇಲೂ ಫರ್ವೇಜ್ ಚಾಕುವಿನಿಂದ ಅಟ್ಯಾಕ್ ಮಾಡಿದ್ದ. ಆತ್ಮರಕ್ಷಣೆಗಾಗಿಯೇ ಇನ್ಸ್ಪೆಕ್ಟರ್ ಆರೋಪಿ ಫರ್ವೇಜ್ ಕಾಲಿಗೆ ಗುಂಡು ಹೊಡೆದಿದ್ದಾರೆ.ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿಕೆಯನ್ನೂ ಕೊಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/01/2022 10:56 pm