ಮುಲ್ಕಿ:ಅಂಗನವಾಡಿ ಕೇಂದ್ರಗಳು ಕೇವಲ ಶಿಕ್ಷಣ ಮಾತ್ರವಲ್ಲದೆ ಸಂಸ್ಕೃತಿ ಸಂಸ್ಕಾರ ಕೊಡುವ ಕೇಂದ್ರವಾಗಬೇಕು ಎಂದು ಶಾಸಕ ಉಮಾನಾಥ ಕೊಟ್ಯಾನ್ ಹೇಳಿದರು.ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, , ಶಿಶು ಅಭಿವೃದ್ದಿ ಯೋಜನೆ ಮಂಗಳೂರು, ಕೆಮ್ರಾಲ್ ಗ್ರಾ ಪಂ ಸಂಯುಕ್ತ ಅಶ್ರಯದಲ್ಲಿ ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಹೊಸಕಾಡಿನಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಅಂಗನವಾಡಿ ಕೇಂದ್ರಕ್ಕೆ ಸಹಕಾರ ನೀಡಿದ ಕೆಮ್ರಾಲ್ ಪಂಚಾಯತ್ ಸದಸ್ಯ ಮಯ್ಯದ್ದಿ ಪಕ್ಷಿಕೆರೆ ರವರನ್ನು ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ,ಸದಸ್ಯರಾದ ಜಾಕ್ಸ್ ನ ಪಕ್ಷಿಕೆರೆ, ಹರಿಪ್ರಸಾದ್, ರೇವತಿ ಶೆಟ್ಟಿಗಾರ್, ಶಶಿ ಸುರೇಶ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಶೈಲ ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಹರೀಶ್ ಕೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅರುಣ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಕೆಶವ ದೇವಾಡಿಗ,ಬೇಬಿ ಕೋಟ್ಯಾನ್, ಶಂಭು ಶೆಟ್ಟಿ ಪಕ್ಷಿಕೆರೆ, ಲಕ್ಷೀನಾರಾಯಣ, ಅಶ್ವಿತ್ ಆಚಾರ್ಯ, ನಾಗೇಶ್ ಬೊಳ್ಳೂರು, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಅಮರ್ ಅತ್ತೂರು, ದಿನೇಶ್ ಹರಿಪಾದೆ, ಸಚಿನ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಸವಿತಾ, ಪ್ರೇಮಲತಾ, ಪ್ರತಿಭಾ, ಶಶಿಕಲಾ, ಯಶೋಧ, ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ನಾಗರತ್ನ ಸ್ವಾಗತಿಸಿ ತಾರಾ ಧನ್ಯವಾದ ಸಮರ್ಪಿಸಿದರು.
Kshetra Samachara
03/10/2022 03:45 pm