ಮುಲ್ಕಿ:ಕೇಂದ್ರದ ಹೊಸ ಶಿಕ್ಷಣ ನೀತಿ (ಎನ್.ಇ.ಪಿ) ಮಕ್ಕಳ ಸಮಗ್ರ ಮತ್ತು ಬಹು ಆಯಾಮದ ಬೆಳವಣಿಗೆಗೆ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಶಿರ್ವದ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಾ|ಸಹನಾ ಹೆಗ್ಡೆ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಎಸ್.ಕೋಡಿಯ ಪದ್ಮಾವತಿ ಲಾನಿನಲ್ಲಿ ನಡೆದ ತೋಕೂರು ಡಾ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ. ವಿನೋದ್ ಅರಾನ್ಹ ವಹಿಸಿದ್ದರು
ಪ್ರಾಂಶುಪಾಲೆ ಶ್ರೀಲತಾ ರಾವ್ ಪೇರೆಂಟ್ ಟೀಚರ್ಸ್ ಎಸೋಸಿಯೇಶನ್ ಅಧ್ಯಕ್ಷ ಪುಷ್ಪರಾಜ್ ಚೌಟ ಪಿ.ಟಿ.ಏ ಹೆಡ್ ಬಾಯ್ ಸಂಜನ್ ಉಳ್ಳಾಲ್ ಸ್ವಾಗತಿಸಿ, ಹೆಡ್ ಗರ್ಲ್ ಕುಮಾರಿ ಅಲೀನಾ ಸೆಹರ್ ವಂದಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆಯ ಬಳಿಕ ಮಕ್ಕಳಿಂದ ವೈವಿಧ್ಯಮಯ ನೃತ್ಯ ರೂಪಕಗಳು ನಡೆಯಿತು.
Kshetra Samachara
10/12/2024 08:03 am