ಕುಂದಾಪುರ : ಮಕ್ಕಳ ಪ್ರತಿಭೆಗಳನ್ನು ಹೊರಹೊಮ್ಮಿಸಲು ಸರ್ಕಾರದ ಪ್ರತಿಭಾ ಕಾರಂಜಿ ಒಂದು ಉತ್ತಮ ಕಾರ್ಯಕ್ರಮ ಎಂದು ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಹೇಳಿದರು. ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಟೆಬಾಗಿಲು ತಲ್ಲೂರು, ಬೈಂದೂರು ವಲಯದ ತಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಲ್ಲೂರು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ ಕುಮಾರ್, ವಕೀಲರು ಹಾಗೂ ನೋಟರಿ ಕುಂದಾಪುರ ಟಿ.ಬಿ.ಶೆಟ್ಟಿ, ಶಾಲಾ ನಾಮ ನಿರ್ದೇಶಿತ ಸದಸ್ಯೆ ಚಂದ್ರಮತಿ ಹೆಗ್ಡೆ, ಸೇರಿದಂತೆ ಮುಂತಾದವರಿದ್ದರು.ಕಾರ್ಯಕ್ರಮದ ನಂತರ ಮಕ್ಕಳ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
Kshetra Samachara
03/09/2022 01:02 pm