ಕಾರ್ಕಳ : ಸರಕಾರಿ ಪ್ರೌಢ ಶಾಲೆ ಮುರತ್ತಂಗಡಿ, ಸಾಣೂರಿನಲ್ಲಿ ಶಾಲಾ ನಾಯಕ ಉಪನಾಯಕ ಸ್ಥಾನಕ್ಕಾಗಿ ವಿದ್ಯುನ್ಮಾನ ಮತಯಂತ್ರವನ್ನು ಮೊಬೈಲ್ ಮೂಲಕ ತೋರಿಸಿ,ಅದರ ಮೂಲಕ ಚುನಾವಣೆಯನ್ನು ಹೇಗೆ ಮಾಡಬಹುದೆಂಬುದನ್ನು ನಿದರ್ಶನದ ಮುಖೇನ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಮತದಾನದ ಪ್ರಾಮುಖ್ಯವನ್ನು ಅರಿಯಬೇಕೆಂಬ ನಿಟ್ಟಿನಲ್ಲಿ, ಸಾರ್ವತ್ರಿಕ ಚುನಾವಣೆ ನಡೆಯುವ ರೀತಿಯಲ್ಲಿಯೇ ವಿದ್ಯಾರ್ಥಿಗಳಿಗೆ ಮೊಬೈಲ್, ವಿದ್ಯುನ್ಮಾನ ಮತಯಂತ್ರದ ಮೂಲಕ ಚುನಾವಣೆ ನಡೆಸಲಾಯಿತು.
ಮುಖ್ಯ ಚುನಾವಣೆ ಅಧಿಕಾರಿಯಾಗಿ ,ಪ್ರಭಾರ ಮುಖ್ಯಗುರು ಗಣೇಶ್ ಮೊಗವೀರ, ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಪರಿಶೀಲಕರು, ಪೋಲಿಂಗ್ ಆಫೀಸರ್ ಗಳಾಗಿ
ಎಲ್ಲಾ ಶಿಕ್ಷಕರು, ಚುನಾವಣೆಯಲ್ಲಿ ಭಾಗಿಯಾಗಿದ್ದರು.
Kshetra Samachara
04/06/2022 11:14 am