This is a modal window.
Beginning of dialog window. Escape will cancel and close the window.
End of dialog window.
ಬಂಟ್ವಾಳ: ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗ ಮಳೆ ನೀರು ತುಂಬಿಕೊಂಡು ಕೊಳಚೆ ಚರಂಡಿಯಂತಿದ್ದ ವ್ಯರ್ಥ ಪ್ರದೇಶ ಈಗ ಸುಂದರವಾದ ಆಟದ ಮೈದಾನವಾಗಿ ಪರಿವರ್ತನೆಯಾನೆಯಾಗಿದೆ.
ಜನ ಸಂಚಾರವೇ ಸಾಧ್ಯವಿಲ್ಲದ ಇಳಿಜಾರು ಜಾಗದಲ್ಲಿ ಈಗ ಕಲ್ಲಿನ ಸುಂದರವಾದ ತಡೆಗೋಡೆ ನಿಮಾಣಗೊಂಡಿದೆ. ಕಾಲೇಜಿನ ಸುತ್ತ ವ್ಯವಸ್ಥಿತವಾದ ರಕ್ಷಣ ಬೇಲಿ ನಿರ್ಮಿಸಲಾಗಿದೆ. ಪರಿಣಿತ ಕಾರ್ಮಿಕರು ಮಾಡಬಹುದಾದ ಕೆಲಸಗಳನ್ನು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
ಬಿ.ಮೂಡ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಯಾಶೀಲವಾದ ರಾಷ್ಟ್ರೀಯ ಸೇವಾ ಯೋಜನೆಯ ತಂಡವೊಂದಿದೆ. ಕಾಲೇಜಿನ ಪ್ರತಿ ಸೇವಾ ಕಾರ್ಯಗಳಲ್ಲೂ ಸಕ್ರಿಯರಾಗಿರುವ ಈ ತಂಡದ ಸುಮಾರು 48 ಮಂದಿ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕಾಲೇಜಿನ ಹಿಂಭಾಗದಲ್ಲಿ ಪೊದೆಗಳು ತುಂಬಿಕೊಂಡು ಕೊಳಚೆ ಚರಂಡಿಯಂತಾಗಿದ್ದ ಸ್ಥಳಕ್ಕೆ ಮಣ್ಣು ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಇದೇ ಜಾಗದಲ್ಲಿ ಇಳಿಜಾರಿನಂತಿದ್ದ ಜಾಗಕ್ಕೆ ಕಾಲೇಜು ಸುತ್ತಮುತ್ತ ಇದ್ದ ಕಪ್ಪು ಕಲ್ಲುಗಳನ್ನು ತಂದು ಜೋಡಿಸಿ, ಮಣ್ಣು ಮೆತ್ತಿ ಗೋಡೆ ನಿರ್ಮಿಸಿದರು. ವಿದ್ಯಾರ್ಥಿಗಳ ಎರಡು ವಾರಗಳ ಪ್ರಯತ್ನದ ಫಲವಾಗಿ ವ್ಯರ್ಥವಾಗಿದ್ದ ಸ್ಥಳ ಇಂದು ಸುಂದರವಾದ ಮೈದಾನವಾಗಿದೆ. ನಿಷ್ಪ್ರಯೋಜಕವಾಗಿದ್ದ ಸ್ಥಳ ವಿದ್ಯಾರ್ಥಿಗಳಿಗೆ ಆಟದ ಮೈದಾನವಾಗಿ ಬದಲಾಗಿರುವುದಕ್ಕೆ ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಾಂಶುಪಾಲ ಯುಸೂಫ್ ವಿಟ್ಲ ಅವರ ಮಾರ್ಗದರ್ಶನದಲ್ಲಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ್, ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ, ದಾಮೋದರ್ ಇ. ಅವರ ಸಲಹೆಯಂತೆ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ತಡೆಗೋಡೆನಿರ್ಮಾಣ, ಮೈದಾನ ರಚನೆ, ರಕ್ಷಣಾ ಬೇಲಿ ಅಳವಡಿಸುವ ಈ ಕಾರ್ಯ ಮಾಡಿದ್ದಾರೆ.
Kshetra Samachara
09/04/2022 06:38 pm