ಉಡುಪಿ: ಹಿಜಾಬ್‌ಗಾಗಿ ಮೊಟ್ಟಮೊದಲು ಹೋರಾಟ ಆರಂಭಗೊಂಡಿದ್ದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ. ಪ್ರಾರಂಭದಲ್ಲಿ ಇಲ್ಲಿನ ಆರು ಮಂದಿ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅನುಮತಿ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸದ್ಯದ ಮಾಹಿತಿ ಪ್ರಕಾರ ಇಲ್ಲಿನ ಸುಮಾರು 25-30 ಮುಸ್ಲಿಂ ವಿದ್ಯಾರ್ಥಿನಿಯರು ಕಳೆದ ಎರಡು ವಾರಗಳಿಂದ ತರಗತಿಗೆ ಗೈರು ಹಾಜರಾಗುತ್ತಿದ್ದಾರೆ.
ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಸುಮಾರು 25-30 ವಿದ್ಯಾರ್ಥಿನಿಯರು ಫೆ.17ರಿಂದ ತರಗತಿಗೆ ಹೋಗುತ್ತಿಲ್ಲ. ಇವರೆಲ್ಲ ಹೈಕೋರ್ಟ್‌ನ ಅಂತಿಮ ಆದೇಶವನ್ನು ಎದುರು ನೋಡುತ್ತಿದ್ದಾರೆ. ಆದೇಶ ಬಂದ ಬಳಿಕ ತರಗತಿಗೆ ಹೋಗಬೇಕೋ ಬೇಡವೋ ಎಂಬ ನಿರ್ಧಾರವನ್ನು ಈ ವಿಧ್ಯಾರ್ಥಿನಿಯರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ವಾರ ಹೈಕೋರ್ಟ್ ಅಂತಿಮ ತೀರ್ಪು ಬರುವ ಎಲ್ಲ ಸಾಧ್ಯತೆಗಳಿವೆ. ತೀರ್ಪು ಬಂದ ನಂತರ ಈ ವಿದ್ಯಾರ್ಥಿನಿಯರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ನೋಡಬೇಕಿದೆ.
Kshetra Samachara
02/03/2022 11:05 pm