ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನಾಡು: ಶರನ್ನವರಾತ್ರಿ ಭಕ್ತಿ ಸಂಭ್ರಮ ಮಧ್ಯೆ ಲಲಿತಾ ಪಂಚಮಿ ಆಚರಣೆ

ಮೂಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಭಕ್ತಿ ಸಂಭ್ರಮದ ಲಲಿತಾ ಪಂಚಮಿ ನಡೆಯಿತು.

ಬೆಳಗ್ಗೆ ಶ್ರೀಕ್ಷೇತ್ರದಲ್ಲಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಚಂಡಿಕಾ ಯಾಗ ನಡೆಯಿತು.

ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಅನ್ನ ಸಂತರ್ಪಣೆ, ವಿಶೇಷ ಭಜನೆ ನಡೆಯಿತು.

ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಅಕೌಂಟೆಂಟ್ ಶಿವಶಂಕರ್ , ಉದಯ ಶೆಟ್ಟಿ ಆದಿಧನ್, ಕಿಶೋರ್ ಶೆಟ್ಟಿ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು.

* ನಾನಾ ಕಡೆ ಲಲಿತ ಪಂಚಮಿ: ಮುಲ್ಕಿ ಪರಿಸರದ ಪಡುಪಣಂಬೂರು, ಚಿತ್ರಾಪು, ಕಿನ್ನಿಗೋಳಿಯ ಉಲ್ಲಂಜೆ ಶ್ರೀ ಕೊರಗಜ್ಜ ಸಾನಿಧ್ಯ ಕ್ಷೇತ್ರ, ಎಳತ್ತೂರು ಮತ್ತಿತರ ಕಡೆ ಲಲಿತಾ ಪಂಚಮಿ ಆಚರಣೆ ನಡೆಯಿತು.

Edited By :
Kshetra Samachara

Kshetra Samachara

10/10/2021 03:12 pm

Cinque Terre

5.99 K

Cinque Terre

0

ಸಂಬಂಧಿತ ಸುದ್ದಿ