ಉಡುಪಿ : ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕೆ ಸನ್ನಿಧಾನ ಎಂದರೆ ಅದು ಒಂದು ರೀತಿಯಲ್ಲಿ ವಿಶೇಷ. ಹಬ್ಬ-ಹರಿದಿನಗಳ ಅಲ್ಲದೆ ಪ್ರತಿನಿತ್ಯ ಸಾವಿರಾರು ಜನ ಭಕ್ತರು ಸನ್ನಿಧಾನಕ್ಕೆ ಬಂದು ತಾಯಿಯ ದರ್ಶನ ಮಾಡುತ್ತಾರೆ.
ನವರಾತ್ರಿಯ ಒಂಬತ್ತು ದಿನಗಳ ಕಾಲ ಕೊಲ್ಲೂರಿನಲ್ಲಿ ವಿಶೇಷವಾದ ಪೂಜೆ ನಡೆಯುತ್ತದೆ ನವರಾತ್ರಿ ಎಂದರೆ ಕೊಲ್ಲೂರಿನಲ್ಲಿ ವಿಶೇಷವಾದ ಹಬ್ಬದ ಸಡಗರ ಇರುತ್ತದೆ ಲಕ್ಷಾಂತರ ಜನ ಭಕ್ತರು ಈ ನವರಾತ್ರಿ ಹಬ್ಬದಲ್ಲಿ ಭಾಗಿಯಾಗುತ್ತಿದ್ದರು .
ಆದರೆ ಇದೀಗ ಕೊಲ್ಲೂರಿಗೆ ರಾಜ್ಯದ ಅನೇಕ ಜಿಲ್ಲೆಗಳಿಂದ ಬರುವ ಜನರ ಸಂಖ್ಯೆಯು ಕೂಡ ಕಮ್ಮಿಯಾಗಿದೆ ಹೊರ ರಾಜ್ಯಗಳಾದ ಕೇರಳ, ತಮಿಳುನಾಡು ಆಂಧ್ರಪ್ರದೇಶ, ತೆಲಂಗಾಣ, ಗಳಿಂದ ಬರುವ ಭಕ್ತರ ಸಂಖ್ಯೆ ಕಮ್ಮಿಯಾಗಿದೆ. ದೇವಸ್ಥಾನವು ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯವೂ ಕೂಡ ಕಾಣಸಿಗುತ್ತದೆ, ಕರೋನ ಎನ್ನುವ ಸಾಂಕ್ರಾಮಿಕ ರೋಗದಿಂದ ಇದೀಗ ಭಕ್ತರ ಸಂಖ್ಯೆ ಕೂಡಾ ಕಮ್ಮಿ ಆಗಿದ್ದು ಎದ್ದುಕಾಣುತ್ತದೆ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಹಬ್ಬಕ್ಕೆ ಭಕ್ತರ ಸಂಖ್ಯೆ ಅತಿ ವಿರಳವಾಗಿದ್ದು ಎದ್ದು ಕಾಣುತ್ತದೆ ಹೊರ ರಾಜ್ಯವಲ್ಲದೆ ರಾಜ್ಯದ ವಿವಿಧ ಕಡೆಯಿಂದ ಭಕ್ತರ ಸಂಖ್ಯೆ ಕಡಿಮೆ ಇದೆ ಜಿಲ್ಲೆಯ ಜನರು ಕೂಡ ದೇವಸ್ಥಾನಕ್ಕೆ ಬರಲು ಹಿಂದೆ ಮುಂದೆ ಯೋಚಿಸುವಂತಹ ಪ್ರಸಂಗ ಎದುರಾಗಿದೆ, ಈ ಸಾಂಕ್ರಾಮಿಕ ರೋಗ ಇಡೀ ಮನುಕುಲವನ್ನೇ ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದರೂ ಸುಳ್ಳಲ್ಲ ನವರಾತ್ರಿಯ ಒಂಬತ್ತು ದಿನಗಳ ನಂತರವಾದರೂ ಕರೋನ ಸಾಂಕ್ರಮಿಕ ರೋಗ ದೇಶವನ್ನು ಬಿಟ್ಟು ತೊಲಗಲಿ ಅನ್ನೋದು ನಮ್ಮ ಆಶಯ.
Kshetra Samachara
21/10/2020 10:04 pm