ಮುಲ್ಕಿ : ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ .2024, ದ.ಕ ,ಶಿಕ್ಷಣ ಸಂಪನ್ಮೂಲ ಕೇಂದ್ರದ ಒಕ್ಕೂಟ, ದ.ಕ, ಪಡಿ ಮಂಗಳೂರು, ಕರ್ನಾಟಕ ಜ್ಞಾನ ವಿಜ್ಞಾನ.ಸಮಿತಿ ದ.ಕ , ಮುಲ್ಕಿ ಪೊಲೀಸ್ ರಾಣೆ ,ಪುನರೂರು ಅನುದಾನಿತ ಭಾರತ್ ಮಾತಾ ಹಿರಿಯ ಹಾಗೂ ಪ್ರೌಢ ಶಾಲೆ ನೇತೃತ್ವದಲ್ಲಿ ಸ್ಯೆಬರ ಅಪರಾಧ ಹಾಗೂ ಮಕ್ಕಳ ರಕ್ಷಣೆ ಕಾನೂನು ಫೋಕ್ಸೋ ಬಗ್ಗೆ ಮಾಹಿತಿ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ ವಹಿಸಿದ್ದರು
ಸಂಪನ್ಮೂಲ ವ್ಯಕ್ತಿಯಾಗಿ.ಮುಲ್ಕಿ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಅನಿತಾ ಮಾತನಾಡಿ ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ಇರಲಿ, ಅಮಿಷಗಳಿಗೆ ಬಲಿಯಾಗಬೇಡಿ,ಭಾರತ ದೇಶದಲ್ಲಿ ಬಾಲಕಾರ್ಮಿಕರಿಗೆ ನಿಷೇಧವಿದ್ದು , ಉತ್ತಮ ಶಿಕ್ಷಣದ ಮೂಲಕ ಸಾಧಕರಾಗಿ ಎಂದರು
Kshetra Samachara
12/12/2024 02:38 pm