ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಬ್ರೇಕಿಂಗ್: ಫಾಜಿಲ್ ಹತ್ಯೆಗೆ ಬಳಸಲಾಗಿದ್ದ ಕಾರು ಪತ್ತೆ?

ಕಾರ್ಕಳ: ಮಂಗಳೂರಿನ ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆಗೆ ಬಳಸಲಾಗಿದ್ದ ತರಹದ್ದೇ ಅಪರಿಚಿತ ಕಾರೊಂದು ಕಾರ್ಕಳದಲ್ಲಿ ಪತ್ತೆಯಾಗಿದ್ದು ಕುತೂಹಲ ಕೆರಳಿಸಿದೆ.ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಈ ಕಾರು ಪತ್ತೆಯಾಗಿದೆ.

ನಿರ್ಜನ ಪ್ರದೇಶದಲ್ಲಿ ಇಯಾನ್ ಕಾರನ್ನು ಯಾರೋ ಬಿಟ್ಟುಹೋಗಿದ್ದಾರೆ.ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆಗೂ ದುಷ್ಕರ್ಮಿಗಳು ಬಿಳಿ ಬಣ್ಣದ ಇಯಾನ್ ಕಾರು ಬಳಸಿದ್ದರು.ಈ ಬೆಳವಣಿಗೆ ಬಳಿಕ ಮಂಗಳೂರು ಪೊಲೀಸರು ಉಡುಪಿ ಜಿಲ್ಲೆ ಕಡೆ ದೌಡಾಯಿಸಿದ್ದಾರೆ. ಜೊತೆಗೆ ಕಾಪು ಪೊಲೀಸರು ಕೂಡ ಕಾರು ಇರುವ ನಿರ್ಜನ ಪ್ರದೇಶದತ್ತ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

31/07/2022 01:43 pm

Cinque Terre

44.24 K

Cinque Terre

5

ಸಂಬಂಧಿತ ಸುದ್ದಿ