ಸುಳ್ಯ : ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯ ತನಿಖೆಯು ಪ್ರಗತಿಯಲ್ಲಿದ್ದು, ಸದ್ಯ ಇಬ್ಬರು ಆರೋಪಿಗಳ ಬಂಧನವಾಗಿದೆ ಎಂದು ಎಂದು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಎಸ್ ಪಿ ರಿಷಿಕೇಶ್ ಸೋನಾವಣೆ ಹೇಳಿದ್ದಾರೆ.
ಝಕೀರ್ ಮತ್ತು ಮಹಮ್ಮದ್ ಶಫೀಕ್ ಎಂಬವರನ್ನು ಇದರಲ್ಲಿ ಶಫಿಕ್ ಬೆಳ್ಳಾರೆ ಮತ್ತು ಝಕೀರ್ ಸವಣೂರು ನಿವಾಸಿ ಎನ್ನಲಾಗಿದೆ. ಝಕೀರ್ ಮೇಲೆ ಈ ಹಿಂದೆ ಒಂದು ಕ್ರಿಮಿನಲ್ ಕೇಸ್ ಇದೆ.ಈ ಇಬ್ಬರ ಸಂಘಟನೆ ಹಿನ್ನಲೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಕೊಲೆಗೆ ಸ್ಪಷ್ಟ ಕಾರಣ, ಹಾಗೂ ಈ ಕೊಲೆಗೆ ಸಂಬಂಧಿಸಿದಂತೆ ಇನ್ನೂ ಯಾರಾದರೂ ಇದ್ದಾರಾ ಎಂಬ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಬೆಳ್ಳಾರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಡಿಜಿಪಿ ಅವರು ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಹತ್ಯೆಯ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
PublicNext
28/07/2022 01:41 pm