ಮಂಗಳೂರು: ಲೋಕಾಯುಕ್ತಕ್ಕೆ ಬಲ ದೊರಕಿದ ಬಳಿಕ ನಡೆದ ದಾಳಿಯಲ್ಲಿ ಮೊದಲ ಬಲಿ ಬಿದ್ದಿದೆ. ಮಂಗಳೂರಿನಲ್ಲಿ ಇಂದು ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ತಹಶೀಲ್ದಾರ್ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾನಂದ ನಾಟೇಕರ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಮಿನಿವಿಧಾನಸೌಧದಲ್ಲಿರುವ ಮಂಗಳೂರು ತಾಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಈತ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ವ್ಯಕ್ತಿಯೊಬ್ಬರಿಗೆ ಭೂಮಿ ಮಾರಾಟ ಸಂಬಂಧ ನಿರಾಪೇಕ್ಷಣಾ ಪತ್ರ ನೀಡಲು ಈತ 10 ಸಾವಿರ ರೂ. ಲಂಚ ಕೇಳಿದ್ದ. ಈ ಬಗ್ಗೆ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ನೀಡಿದ ವ್ಯಕ್ತಿಯಿಂದ ಶಿವಾನಂದ ನಾಟೇಕರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಈತ ಎನ್‌ಒಸಿಗಾಗಿ 4700 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ.
ಲೋಕಾಯುಕ್ತ ಎಸ್ಪಿ ಲಕ್ಷ್ಮಿ ಗಣೇಶ್ ಹಾಗೂ ಡಿವೈಎಸ್‌ಪಿ ಚೆಲುವರಾಜ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
PublicNext
30/09/2022 08:50 pm