ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು - ಸಿಂಗಾಪುರ ನೇರ ವಿಮಾನ ಜ.21ರಿಂದ ವಾರದಲ್ಲಿ ಎರಡು ದಿನ ಸಂಚಾರ

ಮಂಗಳೂರು : ಹೊಸ ವರ್ಷದ ಕೊಡುಗೆಯಾಗಿ ಮಂಗಳೂರಿ ನಿಂದ ಸಿಂಗಾಪುರ ನಡುವೆ ನೇರ ವಿಮಾನ ಹಾರಾಟಕ್ಕೆ ಏ‌ರ್ ಇಂಡಿಯ ಎಕ್ಸ್‌ಪ್ರೆಸ್ ಸಂಸ್ಥೆ ಮುಂದಾಗಿದೆ. ಜ.21ರಿಂದ ವಾರದಲ್ಲಿ ಎರಡು ದಿನಗಳ ಕಾಲ ಈ ವಿಮಾನ ಸಂಚಾರ ನಡೆಸಲಿದೆ. ಜತೆಗೆ ಮಂಗಳೂರು- ದಿಲ್ಲಿ ಮಂಗಳೂರು - ಪುಣೆ ನಡುವೆಯೂ ನೇರ ವಿಮಾನ ಹಾರಾಟ ನಡೆಸಲಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ತಿಳಿಸಿರುವ ಸಂಸದ ಕ್ಯಾ। ಬ್ರಿಜೇಶ್ ಚೌಟ, ಸಿಂಗಾಪುರದಲ್ಲಿ ನೆಲೆಸಿರುವ 'ಮಂಗಳೂರಿಗರಿಗೆ ಊರಿಗೆ ಬರಲು ಮತ್ತು ಮಂಗಳೂರಿನಲ್ಲಿ ಹೂಡಿಕೆಗೆ ಈ ಸೌಕರ್ಯ ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಕ್ಟ್ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವಂತಿದೆ. ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಬೇಕೆಂಬ ಬೇಡಿಕೆ ಇತ್ತು. ಈ ಕುರಿತಂತೆ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಈಗ ನೇರ ವಿಮಾನ ಸಂಪರ್ಕಕ್ಕೆ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ವಿಮಾನ ಯಾನ ಆರಂಭಿಸುವುದರೊಂದಿಗೆ ಆಗ್ನೆಯ ಏಷ್ಯಾದ ಮೊದಲ ಅಂತಾರಾಷ್ಟ್ರೀಯ ತಾಣಕ್ಕೆ ವಿಮಾನ ಸಂಪರ್ಕ ಕಲ್ಪಿಸಿದಂತಾಗಿದೆ. ಈವರೆಗೆ ಮಧ್ಯಪ್ರಾಚ್ಯ ಮತ್ತು ಸೌದಿಗೆ ವಿಮಾನ ಸೇವೆ ಇತ್ತು.

2025ರ ಫೆ.1ರಿಂದ ಮಂಗಳೂರಿನಿಂದ ದಿಲ್ಲಿಗೆ ಪ್ರತಿದಿನ ನಾನ್ ಸ್ಟಾಪ್ ಏರ್ ಇಂಡಿಯಾ ಎಕ್ ಪ್ರೆಸ್ ವಿಮಾನಯಾನ ಇರಲಿದೆ.

ಪ್ರತಿ ಶನಿವಾರ ಮಂಗಳೂರು- ಪುಣೆ ನಡುವೆ ಎರಡು ನೇರ ವಿಮಾನಯಾನ ಸೌಲಭ್ಯವನ್ನೂ ಮಾಡಲಾಗುವುದು ಎಂದು ಏರ್ ಇಂಡಿಯಾ ಘೋಷಿಸಿದೆ.

ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 6.40ಕ್ಕೆ ಹೊರಡುವ ವಿಮಾನ 9.35ಕ್ಕೆ ದಿಲ್ಲಿಗೆ ತಲುಪುತ್ತದೆ. "ಅದೇ ರೀತಿ ದಿಲ್ಲಿಯಿಂದ 6.40ಕ್ಕೆ ಹೊರಡುವ ವಿಮಾನ 9.35ಕ್ಕೆ ಮಂಗಳೂರಿಗೆ ತಲುಪಲಿದೆ.

ಮಂಗಳೂರಿನಿಂದ ಪುಣೆಗೆ ಶನಿವಾರ ಬೆಳಗ್ಗೆ 8 ಗಂಟೆಗೆ, ಹೊರಡುವ ವಿಮಾನ 9.25ಕ್ಕೆ ಪುಣೆ ತಲುಪಲಿದೆ. ಪುಣೆಯಿಂದ 9.55ಕ್ಕೆ ಹೊರಟು 11.40ಕ್ಕೆ ಮಂಗಳೂರು ತಲುಪಲಿದೆ.ಸಂಜೆ 6.30 ಮಂಗಳೂರಿನಿಂದ ಹೊರಟು 8 ಗಂಟೆಗೆ ಪುಣೆ ತಲುಪಲಿದೆ. ಪುಣೆಯಿಂದ ರಾತ್ರಿ 8.35ಕ್ಕೆ ಹೊರಟು 10.05ಕ್ಕೆ ಮಂಗಳೂರು ತಲುಪಲಿದೆ.

Edited By : PublicNext Desk
PublicNext

PublicNext

12/12/2024 03:47 pm

Cinque Terre

2.69 K

Cinque Terre

0

ಸಂಬಂಧಿತ ಸುದ್ದಿ