ಮುಂದಿನ ಆದೇಶ ಬರುವ ತನಕ ಕೊಡೆರಿ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ಚಟುವಟಿಕೆಗಳು ನಡೆಯಬಾರದು ಎಂದು ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕೊಡೇರಿ ಬಂದರಿನಲ್ಲಿ ಕಳೆದ ಎರಡು ದಿನಗಳಿಂದ ಸ್ಥಳೀಯ ಮೀನುಗಾರರು ಮತ್ತು ಉಪ್ಪುಂದದ ಮೀನುಗಾರರ ನಡುವೆ ಮೀನು ಖಾಲಿ ಮಾಡುವ ವಿಚಾರಕ್ಕೆ ಜಟಾಪಟಿ ನಡೆಯುತ್ತಿತ್ತು. ಶನಿವಾರ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮೀನು ಖಾಲಿ ಮಾಡಲು ಬಿಡದೆ ನದಿಯಲ್ಲಿ ಅಡ್ಡಗಟ್ಟಿದ್ದ ಕೊಡೇರಿ ಮೀನುಗಾರರ ಮೇಲೆ ಲಾಠಿಚಾರ್ಜ್ ಮಾಡಿ ಚದುರಿಸಿದ್ದರು.
ಬೈಂದೂರು ಕಡಲ ಸೀಮೆಯಲ್ಲಿ ಬಿಗುವಿನ ವಾತಾವರಣ ಇದ್ದು ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕೊಡೆರಿ ಉಪ್ಪುಂದ ಮರವಂತೆ ಬೈಂದೂರು ಕಿರಿಮಂಜೇಶ್ವರ ಮೀನುಗಾರರು ಯಾವುದೇ ಕಾರಣಕ್ಕೂ ಕಸುಬು ಮಾಡಬಾರದು ನೀನು ಹೊತ್ತು ಕೊಡೆರಿ ಬಂದರಿಗೆ ಬರಬಾರದು ಎಂದು ಖಡಕ್ ಸೂಚನೆ ಹೊರಡಿಸಲಾಗಿದೆ. ಈ ಭಾಗದ ಮೀನುಗಾರರನ್ನು ಪ್ರತ್ಯೇಕವಾಗಿ ಕರೆಸಿ ಸಭೆ ನಡೆಸಲಾಗುವುದು ಎಂದು ಡಿ.ಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಮೀನುಗಾರರ ಮೇಲೆ ಕೇರಳ ಮತ್ತು ತಮಿಳುನಾಡಿನ ಮೀನುಗಾರರು ದಬ್ಬಾಳಿಕೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರು ತಮ್ಮೊಳಗೆ ತಾವು ಈ ತರ ಕಚ್ಚಾಡುತ್ತಿರುವುದು ದುರಾದೃಷ್ಟಕರ.
Kshetra Samachara
08/11/2020 06:47 pm