ಬಸ್ರೂರು: ಉಡುಪಿ ಜಿಲ್ಲೆಯ ಬಸ್ರೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಕ್ರಿಕೆಟ್ ಆಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಕೆಜಿಎಫ್ ಸ್ಟಾರ್ ಯಶ್ ತಮ್ಮ ಬಹುನಿರೀಕ್ಷಿತ ಕೆಜಿಎಫ್ 2 ಸಿನೆಮಾದ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ.ಕುಂದಾಪುರ ತಾಲೂಕಿನ ಬಸ್ರೂರುಗೆ ಆಗಮಿಸಿದ್ದ ಯಶ್ , ರವಿ ಬಸ್ರೂರು ಮನೆಯ ಬಳಿ ಕ್ರಿಕೆಟ್ ಆಡಿದ ವಿಡಿಯೋವನ್ನು ಅವರ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.ಸ್ಥಳೀಯ ಹುಡುಗರು ತಮ್ಮ ನೆಚ್ಚಿನ ಸ್ಟಾರ್ ಜೊತೆ ಕ್ರಿಕೆಟ್ ಆಡಿ ರೋಮಾಂಚನಗೊಂಡರು.ಅಂದಹಾಗೆ ಕೆಜಿಎಫ್ 2 ಸಿನೆಮಾದ ಸಂಗೀತ ನಿರ್ದೇಶನವನ್ನು ಇಲ್ಲಯವರೇ ಆದ ರವಿ ಬಸ್ರೂರ್ ಮಾಡುತ್ತಿದ್ದಾರೆ.ಅದರ ಕೆಲಸಕ್ಕಾಗಿ ಯಶ್ ಬಸ್ರೂರಿನಲ್ಲಿ ಉಳಿದಿದ್ದಾರೆ.
PublicNext
01/02/2022 09:44 am