ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಕುಟುಂಬ ಸಮೇತ ಭೇಟಿ ನೀಡಿದರು.
ದೇವಳದ ವತಿಯಿಂದ ಅಮೂಲ್ಯ ಅವರಿಗೆ ಶ್ರೀ ದೇವರ ಶೇಷ ವಸ್ತ್ರ ಪ್ರಸಾದವನ್ನು ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ನೀಡಿದರು. ನಂತರ ಕಟೀಲು ಆನೆ ಮಹಾಲಕ್ಷಿ ಜೊತೆ ಅಮೂಲ್ಯ ಸ್ವಲ್ಪ ಹೊತ್ತು ಕಳೆದರು. ದೇವಳದಲ್ಲಿ ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು
PublicNext
02/12/2024 06:20 pm