ಮಂಗಳೂರು: ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರ ಆಹಾನ್ ಶೆಟ್ಟಿ ಅವರೂ ಬಾಲಿವುಡ್ ಚಿತ್ರರಂಗ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಮಿಲನ್ ಲೂಥ್ರಿಯಾ ನಿರ್ದೇಶನದ ‘ತಡಪ್’ ಹಿಂದಿ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿರಿಸುತ್ತಿದ್ದಾರೆ ಆಹಾನ್.
ವಿಭಿನ್ನ ಪ್ರೇಮಕಥೆಯ ಹಂದರವುಳ್ಳ ಈ ಚಿತ್ರದಲ್ಲಿ ಆಹಾನ್‌ಗೆ ಜೋಡಿಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ಆಗಮಿಸಿದ ನಟ
ಸುನಿಲ್ ಶೆಟ್ಟಿ ಅವರು ಪುತ್ರ ಆಹಾನ್ ಜೊತೆಗೂಡಿ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾಧ್ಯಮದವರೊಂದಿಗೆ ಮಾತನಾಡಿದರು.
ಪೋಸ್ಟರ್‌ನಲ್ಲಿ ಮೈತುಂಬಾ ಗಾಯಗೊಂಡಿರುವ ಆಹಾನ್, ನಾಯಕಿಯನ್ನು ತಬ್ಬಿಕೊಂಡಿರುವ ದೃಶ್ಯವಿದೆ. ಇದರಲ್ಲಿ ಅವರ ಮುಖವನ್ನು ತೋರಿಸಿಲ್ಲ. 'ತಡಪ್' ಸಿನಿಮಾ ತೆಲುಗಿನ ಆರ್‌ಎಕ್ಸ್ 100 ಸಿನಿಮಾದ ರಿಮೇಕ್ ಆಗಿದೆ. ಕಾರ್ತಿಕೇಯ ಗುಮ್ಮಕೊಂಡ ಹಾಗೂ ಪಾಯಲ್ ರಜಪೂತ್ ತೆಲುಗಿನಲ್ಲಿ ನಾಯಕ- ನಾಯಕಿಯಾಗಿ ನಟಿಸಿದ್ದರು.
Kshetra Samachara
28/11/2021 05:01 pm