ಉಡುಪಿ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ತೆರೆಕಂಡ ಕಡೆಯ ಚಿತ್ರ 'ನವರತ್ನ'. ಈ ಸಿನಿಮಾದ ಚಿತ್ರೀಕರಣ ಉಡುಪಿಯ ಮಲ್ಪೆಯಲ್ಲಿ ನಡೆದಿತ್ತು. ಮೀನುಗಾರಿಕಾ ಬಂದರಿನಲ್ಲಿ ಡಾನ್ಸ್ ಕಮ್ ಫೈಟ್ ಚಿತ್ರೀಕರಣದ ಸಂದರ್ಭ ಅಪ್ಪು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದರು.
ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಪಡೆದು, ಪರ್ಯಾಯ ಸ್ವಾಮೀಜಿಗಳನ್ನು ಭೇಟಿಯಾಗಿದ್ದರು. ಧಾರ್ಮಿಕ ಕಾರ್ಯಕ್ರಮವೊಂದರ ಉದ್ಘಾಟನೆ ಮಾಡಿದ್ದರು. ಭಕ್ತ ಕನಕದಾಸ ಚಿತ್ರದ ನಂತರ ಡಾ. ರಾಜ್‌ಕುಮಾರ್ ಅವರ ಕುಟುಂಬ ಉಡುಪಿ ಕೃಷ್ಣಮಠದ ಜೊತೆ ಬಹಳ ನಂಟು ಇಟ್ಟುಕೊಂಡಿತ್ತು.
Kshetra Samachara
29/10/2021 04:06 pm